ಚನ್ನಪಟ್ಟಣ ಉಪಚುನಾವಣಾ ಕಣದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಇದೇ ವೇಳೆ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ. ಚನ್ನಪಟ್ಟಣ ಚುನಾವಣೆಗೆ ಅಭ್ಯರ್ಥಿ ಆಗುವ ಬಗ್ಗೆ ಭಾವನೆಗಳು ಇರಲಿಲ್ಲ, ಆದರೆ ಕೆಲ ರಾಜಕೀಯ ಬೆಳವಣಿಗೆ ಹಿನ್ನೆಲೆ ಸ್ಪರ್ಧಿಸಿದ್ದೇನೆ ಎಂದು ಹೇಳಿದ್ದಾರೆ.. ಅಲ್ಲದೇ ಮತದಾರರು ಅವರ ಹೃದಯದಲ್ಲಿ ಒಂದು ಸ್ಥಾನ ಕೊಡ್ತಾರೆ ಎಂಬ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.