ರಾಮನಗರ : ಚನ್ನಪಟ್ಟನ ವಿಧಾನಸಭಾ ಕ್ಷೇತ್ರದಲ್ಲಿ ಎನ್ ಡಿಎ ಆಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚುನಾವಣಾ ಪ್ರಚಾರ ಮುಂದುವರೆದಿದೆ. ಗುಡಿ ಸರಗೂರಿನಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದ್ದು, ಆರತಿ ಬೆಳಗಿ ನಿಖಿಲ್ ಅವರನ್ನ ಮಹಿಳೆಯರು ಸ್ವಾಗತಿಸಿದ್ದಾರೆ. ಈ ವೇಳೆ ವೃದ್ಧೆಯರ ಕಾಲಿಗೆ ಬಿದ್ದು ನಿಖಿಲ್ ಕುಮಾರಸ್ವಾಮಿ ಆಶೀರ್ವಾದ ಪಡೆದಿದ್ದಾರೆ.
ವೀರೇಗೌಡನದೊಡ್ಡಿ ಮತ್ತು ನೇರಳೂರಿನಲ್ಲೂ ನಿಖಿಲ್ ಮತಯಾಚನೆ ನಡೆಸಿದ್ದು, ವೀರೇಗೌಡನದೊಡ್ಡಿ ಗ್ರಾಮಸ್ಥರೂ ಕೂಡ ನಿಖಿಲ್ ಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಮನೆ ಮೇಲಿಂದ ಪುಷ್ಪ ವೃಷ್ಠಿ ಹರಿಸಿ ನಿಖಿಲ್ ಕುಮಾರಸ್ವಾಮಿಯವರನ್ನ ಬರಮಾಡಿಕೊಂಡಿದ್ದಾರೆ.