ಅಡಿಲೇಡ್: ಬಾರ್ಡರ್ ಗವಾಸ್ಕರ್ ಟ್ರೋಫಿ ಟೂರ್ನಿಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾ ನೆಲದಲ್ಲಿ ವಿಶೇಷ ದಾಖಲೆ ಬರೆದಿದಾರೆ. ಆಡಿರುವ ಎರಡೇ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದಿದ್ದಾರೆ.
ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಆದರೆ ಈ ಪಂದ್ಯದ ಎರಡೂ ಇನಿಂಗ್ಸ್ ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜತೆಗೆ ಅವರು ಆಸ್ಟ್ರೇಲಿಯಾದಲ್ಲಿ ಹೊಸ ದಾಖಲೆಯನ್ನೂ ಬರೆದಿದಾರೆ. ನಿತೀಶ್ ಕುಮಾರ್ ರೆಡ್ಡಿ ಪರ್ತ್ ಪಂದ್ಯದಲ್ಲಿ 41 ಮತ್ತು 38 ರನ್ ಗಳಿಸಿದ್ದರೆ, ಅಡಿಲೇಡ್ ಟೆಸ್ಟ್ ನಲ್ಲಿ 42 ಮತ್ತು 42 ರನ್ ಗಳಿಸಿದ್ದರು. ಈ ಮೂಲಕ ಎರಡು ಪಂದ್ಯಗಳಿಂದ 163 ರನ್ ಗಳಿಸಿದಾರೆ.
ನಿತೀಶ್ ಎರಡೂ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದಾರೆ. ಜತೆಗೆ ತಮ್ಮ ಸ್ಫೋಟದ ಆಟದಿಂದ ಗಮನ ಸೆಳೆದಿದಾರೆ. ನಿತೀಶ್ ಏರಡೂ ಪಂದ್ಯಗಳಲ್ಲಿ 7 ಸಿಕ್ಸರ್ ಸಿಡಿಸಿದಾರೆ. ಆ ಮೂಲಕ ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿದ್ದ ದಾಖಲೆಯನ್ನೂ ಮುರಿದಿದಾರೆ. ಸೆಹ್ವಾಗ್ 2003 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಟೆಸ್ಟ್ ಸರಣಿಯಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಆದರೆ ನಿತೀಶ್ ಎರಡೇ ಪಂದ್ಯದಲ್ಲಿ ಈ ದಾಖಲೆ ಮುರಿದಿದಾರೆ. ಇನ್ನೂ ಮೂರು ಪಂದ್ಯಗಳು ಬಾಕಿ ಇದ್ದು ನಿತೀಶ್ ಖಾತೆಗೆ ಇನ್ನಷ್ಟು ಸಿಕ್ಸರ್‌ಗಳು ಸೇರುವ ಸಾಧ್ಯತೆ ಇದೆ.
ಇಲ್ಲಿ ಮತ್ತೊಂದು ವಿಶೇಷವೆಂದರೆ ನಿರೀಶ್ ವೇಗದ ಬೌಲರ್‌ಗಳ ವಿರುದ್ಧವೇ ಹೆಚ್ಚು ಸಿಕ್ಸರ್ ಸಿಡಿಸಿದಾರೆ. ವೇಗಿಗಳ ಸ್ವರ್ಗ ಎಂದೇ ಖ್ಯಾತಿ ಪಡೆದಿರೋ ಪರ್ತ್ ಮತ್ತು ಅಡಿಲೇಡ್ ಪಿಚ್ ನಲ್ಲಿ ಆಸ್ಟ್ರೇಲಿಯಾದ ವೇಗಿಗಳ ವಿರುದ್ಧ ಸಿಕ್ಸರ್‌ಗಳ ಸುರಿಮಳೆ ಸುರಿಸಿದಾರೆ. ನಿತೀಶ್ ರೆಡ್ಡಿ ಪ್ಯಾಟ್ ಕಮಿನ್ಸ್ ಹಾಗೂ ಸ್ಕಾಟ್ ಬೋಲೆಂಡ್ಗೆ ತಲಾ ಎರಡೆರಡು ಸಿಕ್ಸರ್ಗಳನ್ನು ಸಿಡಿಸಿದ್ದರೆ, ಮಿಚೆಲ್ ಮಾರ್ಷ್ ಮತ್ತು ಮಿಚೆಲ್ ಸ್ಟಾರ್ಕ್ಗೆ ತಲಾ ಒಂದೊಂದು ಸಿಕ್ಸರ್ ಬಾರಿಸಿದ್ದಾರೆ. ಇದೂ ಸಹ ದಾಖಲೆಯಾಗಿದೆ. ಭಾರತದ ಯಾವೊಬ್ಬ ಬ್ಯಾಟರ್ ಸಹ ಆಸ್ಟ್ರೇಲಿಯಾದಲ್ಲಿ ಆಸಿಸ್ ವೇಗಿಗಳ ವಿರುದ್ಧ ಟೆಸ್ಟ್ ನಲ್ಲಿ ಇಷ್ಟು ಸಿಕ್ಸರ್ ಸಿಡಿಸಿಲ್ಲ.