ಕ್ರೀಡೆಗಳು

ನಿತೀಶ್‌ ರೆಡ್ಡಿ ಆಕರ್ಷಕ ಶತಕ… ಫಾಲೋಆನ್‌ ತಪ್ಪಿಸಿಕೊಂಡ ಭಾರತ

ಯುವ ಆಟಗಾರ ನಿತೀಶ್‌ ಕುಮಾರ್‌ ರೆಡ್ಡಿಯ ಆಕರ್ಷಕ ಶತಕ ಮತ್ತು ವಾಷಿಂಗ್ಟನ್‌ ಸುಂದರ್‌ ಗಳಿಸಿದ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಬಾಕ್ಸಿಂಗ್‌ ಡೇ ಟೆಸ್ಟ್‌ ನಲ್ಲಿ ಫಾಲೋ ಆನ್‌ ಆಗುವುದರಿಂದ ಪಾರಾಗಿದೆ.

ಮೆಲ್ಬರ್ನ್‌: ಯುವ ಆಟಗಾರ ನಿತೀಶ್‌ ಕುಮಾರ್‌ ರೆಡ್ಡಿಯ ಆಕರ್ಷಕ ಶತಕ ಮತ್ತು ವಾಷಿಂಗ್ಟನ್‌ ಸುಂದರ್‌ ಗಳಿಸಿದ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಬಾಕ್ಸಿಂಗ್‌ ಡೇ ಟೆಸ್ಟ್‌ ನಲ್ಲಿ ಫಾಲೋ ಆನ್‌ ಆಗುವುದರಿಂದ ಪಾರಾಗಿದೆ.

ಸರಣಿಯುದ್ಧಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ನಿತೀಶ್‌  ಕುಮಾರ್‌ ರೆಡ್ಡಿ ಮೆಲ್ಬರ್ನ್‌ ಟೆಸ್ಟ್‌ ನಲ್ಲಿ ಜವಾಬ್ದಾರಿಯುತ ಆಟವಾಡಿ ಶತಕ ಸಿಡಿಸಿದ್ದಾರೆ. ಮೂರನೇ ದಿನಾಟದ ಅಂತ್ಯಕ್ಕೆ ಅಜೇಯ 105 ರನ್‌ ಗಳಿಸಿದ್ದು ನಾಲ್ಕನೆ ದಿನಕ್ಕೆ ಆಟ ಕಾಯ್ದಿರಿಸಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 5 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿತ್ತು. ಮೂರನೇ ದಿನದಲ್ಲಿ ರಿಷಭ್‌ ಪಂತ್‌ 28 ರನ್‌ ಗಳಿಸಿ ಔಟಾದರೆ ರವೀಂದ್ರ ಜಡೇಜಾ 17 ರನ್‌ ಗಳಿಸಿ ಔಟಾದರು. ಈ ಹಂತದಲ್ಲಿ ಜತೆಯಾದ ನಿತೀಶ್‌ ಕುಮಾರ್‌ ರೆಡ್ಡಿ ಮತ್ತು ವಾಷಿಂಗ್ಟನ್‌ ಸುಂದರ್‌ ತಾಳ್ಮೆಯ ಆಟವಾಡಿ 127 ರನ್‌ ಜತೆಯಾಟವಾಡಿದರು. ಇಬ್ಬರೂ ಆಟಗಾರರ ಆಕರ್ಷಕ ಆಟದ ನೆರವಿನಿಂದ ಟೀಂ ಇಂಡಿಯಾ ಫಾಲೋಆನ್‌ ನಿಂದ ಪಾರಾಗಿದೆ. ದಿನದಾಟದ ಅಂತ್ಯಕ್ಕೆ ಭಾರತ ತಂಡ 116 ಓವರ್‌ ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 358 ರನ್‌ ಗಳಿಸಿದೆ.

ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ನಿಂತರವಾಗಿ ಸ್ಥಿರ ಪ್ರದರ್ಶನ ನೀಡುತ್ತಿರುವ ನಿತೀಶ್‌ ಕುಮಾರ್‌ ರೆಡ್ಡಿ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಮೊದಲ ಅರ್ಧಶತಕ ಗಳಿಸುತ್ತಿದ್ದ ಪುಷ್ಟ ಚಿತ್ರದ ಶೈಲಿಯಲ್ಲೇ ಸಂಭ್ರಮಿಸಿ ಖುಷಿ ಪಟ್ಟರು. ಇನ್ನು ದಿನಾದಟ ಕೊನೆಯಲ್ಲಿ ಬೌಂಡರಿ ಸಿಡಿಸುವ ಮೂಲಕ ಶತಕ ಸಿಡಿಸಿದ ನಿತೀಶ್‌ ಚೊಚ್ಚಲ ಶತಕ ಗಳಿಸಿದ್ದಾರೆ.