ವೈರಲ್

ಓಯೋ ʼಲವರ್‌ʼಗಳಿಗಿಲ್ಲ ಎಂಟ್ರಿ.. ಚೆಕ್‌-ಇನ್‌ ರೂಲ್ಸ್‌ ಚೇಂಜ್‌..!

ದಂಪತಿಯಲ್ಲದೇ ಹೋಟೆಲ್‌ ರೂಮ್‌ ಬುಕ್‌ ಮಾಡ್ತಿದ್ದ ಯುವಕ-ಯುವತಿಯರಿಗೆ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಓಯೋ ಶಾಕಿಂಗ್‌ ನ್ಯೂಸ್‌ವೊಂದನ್ನ ಕೊಟ್ಟಿದೆ..

ದಂಪತಿಯಲ್ಲದೇ ಹೋಟೆಲ್‌ ರೂಮ್‌ ಬುಕ್‌ ಮಾಡ್ತಿದ್ದ ಯುವಕ-ಯುವತಿಯರಿಗೆ ಆನ್‌ಲೈನ್‌ ಪ್ಲಾಟ್‌ಫಾರ್ಮ್‌ ಓಯೋ ಶಾಕಿಂಗ್‌ ನ್ಯೂಸ್‌ವೊಂದನ್ನ ಕೊಟ್ಟಿದೆ.. ಮದುವೆ ಆಗದೆ ಹೋಟೆಲ್‌ನಲ್ಲಿ ರೂಮ್‌ ಕೇಳೋ ಯುವಕ-ಯುವತಿಯರಿಗೆ ಇನ್ಮುಂದೆ ಒಯೋ ರೂಮ್ಸ್‌ಗೆ ಎಂಟ್ರಿ ಕೊಡಲ್ಲ ಅಂತ ಹೇಳಿದೆ.. 

ದೇಶಾದ್ಯಂತ ಹೆಚ್ಚು ಜನಪ್ರಿಯವಾಗಿರುವ OYO,, ಹೊಸ ರೂಲ್ಸ್‌ ಜಾರಿಗೆ ತರಲು ಮುಂದಾಗಿದ್ದು, ಈ ನಿಯಮದಿಂದ ಅವಿವಾಹಿತ ಜೋಡಿಗೆ ಟೆನ್ಷನ್ ಶುರುವಾಗಿದೆ.. ಇಷ್ಟು ದಿನ ಮದ್ವೆಯಾಗದ ಯುವಕ-ಯುವತಿ ಜೋಡಿಗೆ ರೂಮ್ ನೀಡುತ್ತಿದ್ದ ಹೋಟೆಲ್ಗಳು ಇನ್ನು ಮುಂದೆ ರೂಮ್ ನೀಡೋದು ಅನುಮಾನವಾಗಿದೆ.. ಏಕೆಂದರೆ ಜನರು ಸೇರಿ ವಿವಿಧ ಸಂಘಟನೆಗಳಿಂದ ಹೋಟೆಲ್‌ ರೂಮ್‌ ಬುಕ್ಕಿಂಗ್‌ ಸಂಬಂಧ ಓಯೋ ಅಭಿಪ್ರಾಯ ಕೇಳಿತ್ತು.. ಈ ವೇಳೆ ಬಹುತೇಕರು ಅವಿವಾಹಿತ ಜೋಡಿಗಳಿಗೆ ರೂಮ್ ನೀಡದಂತೆ ಮನವಿ ಸಲ್ಲಿಸಿದ್ದರು, ಜನರ ಒತ್ತಾಯ ಅಲಿಸಿರುವ ಓಯೋ ಇದೀಗ ರೂಮ್‌ ಬುಕ್ಕಿಂಗ್‌ನಲ್ಲಿ ಬದಲಾವಣೆ ತರಲು ಮುಂದಾಗಿದೆ.. ದಂಪತಿಯಲ್ಲದೇ ಹೋಟೆಲ್‌ ರೂಮ್‌ ಬುಕ್‌ ಮಾಡ್ತಿದ್ದ ಯುವಕ-ಯುವತಿಯರಿಗೆ ಇನ್ಮುಂದೆ ನೋ ಎಂಟ್ರಿ ಎಂದಿದೆ.. 

ಮೊದಲ ಹಂತದಲ್ಲಿ ಉತ್ತರಪ್ರದೇಶದ ಮೀರತ್‌ನಿಂದಲೇ ರೂಲ್ಸ್‌ ಜಾರಿಯಾಗಿದೆ.. ಪಾಲುದಾರ ಹೋಟೆಲ್‌ಗಳಿಗೆ ಹೊಸ ಚೆಕ್-ಇನ್ ನೀತಿಯನ್ನು ಪ್ರಾರಂಭಿಸಿದೆ.. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓಯೋ, ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ನೀಡೋದಕ್ಕೆ ನಾವು ಬದ್ಧವಾಗಿದ್ದೇವೆ.. ವೈಯಕ್ತಿಕ ಸ್ವಾತಂತ್ರ್ಯ ಗೌರವಿಸುವ ಮಧ್ಯೆ ಸಮಾಜದ ಬೇಡಿಕೆ ಆಲಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದಿದೆ.. 

ಹೀಗಾಗಿ ಇನ್ಮುಂದೆ ಓಯೋ ಹೊಸ ರೂಲ್ಸ್‌ ಪ್ರಕಾರ, ರೂಮ್‌ ಚೆಕ್-ಇನ್ ಸಮಯದಲ್ಲಿ ಅಧಿಕೃತ ಗುರುತಿನ ಚೀಟಿ ಮತ್ತು ನಿಮ್ಮೊಂದಿಗೆ ಬರೋವರರ ಸಂಬಂಧ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ.. ನೀವು ಬುಕ್ಕಿಂಗ್ ಆನ್‌ಲೈನ್ ಅಥವಾ ಆಫ್‌ಲೈನ್ ಮಾಡಿದ್ರೂ ಎಲ್ಲಾ ದಾಖಲೆಗಳನ್ನು ನೀಡಬೇಕಾಗುತ್ತದೆ.. ರೂಮ್‌ ಬುಕ್ಕಿಂಗ್‌ ಕೊಡೋದು, ಬಿಡೋದು ಹೋಟೆಲ್‌ಗೆ ಸಂಬಂಧಿಪಟ್ಟಿರುತ್ತದೆ.. ಓಟ್ನಲ್ಲಿ.. ಖಾಸಗಿ ಸಮಯ ಕಳೆಯಲು ಓಯೋ ರೂಮ್ ಬುಕ್ ಮಾಡುತ್ತಿದ್ದ ಪ್ರೇಮಿಗಳಿಗೆ ಇದು ಬ್ಯಾಡ್ ನ್ಯೂಸ್ ಆಗಿದೆ.. ಒಂದು ವೇಳೆ ಹೊಸ ನಿಯಮ ಯಶಸ್ವಿಯಾದ್ರೆ  ಹಂತ ಹಂತವಾಗಿ ದೇಶದ ಎಲ್ಲಾ ಭಾಗದಲ್ಲಿಯೂ ಜಾರಿಗೆ ತರಲು ಓಯೋ ಯೋಚಿಸಿದೆ..