ದೇಶ

ಇಸ್ಲಾಂ ಮೇಲೆ ನಂಬಿಕೆ ಇಲ್ಲ.. ಮುಸ್ಲಿಂ ಹುಡುಗನ ಮದುವೆ ಆಗಲ್ಲ : ಉರ್ಫಿ ಜಾವೇದ್‌

ನಾನು 17 ವರ್ಷದವಳಾಗಿದ್ದಾಗ ಅವರು ನನ್ನನ್ನು ಮತ್ತು ನನ್ನ ಒಡಹುಟ್ಟಿದವರನ್ನು ನಮ್ಮ ತಾಯಿಯ ಬಳಿ ಬಿಟ್ಟು ಹೋದರು. ನಾನು ಈಗ ಭಗವದ್ಗೀತೆಯನ್ನು ಓದುತ್ತಿದ್ದೇನೆ. ನಾನು ಹಿಂದೂ ಧರ್ಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೇನೆ ಅಂತಾ ಹೇಳಿದ್ದಾರೆ.

ನಟಿ ಉರ್ಫಿ ಜಾವೇದ್‌ ಹೆಸರು ಕೇಳಿದಾಕ್ಷಣ ಎಲ್ಲರಿಗೂ ನನೆಪಾಗೋದು ಅವರ ಕಾಸ್ಟ್ಯೂಮ್‌ ಸ್ಟೈಲ್‌. ಈಕೆ ಚಿತ್ರ-ವಿಚಿತ್ರ,, ಬಟ್ಟೆಗಳ ಧರಿಸುವ ಮೂಲಕವೇ ಸುದ್ದಿಯಲ್ಲಿರ್ತಾಳೆ. ತುಂಡುಡುಗೆಯಲ್ಲಿಯೇ ಸಾರ್ವಜನಿಕವಾಗಿ ಕಾಣಿಸಿಕೊಳ್ತಾರೆ.. ಸಿನಿಮಾ, ಕಿರುತೆರೆಯಲ್ಲಿ ಹೆಚ್ಚಾಗಿ ನಟಿಸದಿದ್ದರೂ ಸೋಷಿಯಲ್‌ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೆ ಅಭಿಮಾನಿಗಳ ಹೊಂದಿದ್ದಾಳೆ ಊರ್ಫಿ ಜಾವೇದ್.. ಯಾರಿಗೂ ಕೇರ್‌ ಮಾಡದ ಈಕೆ, ತಮಗೆ ಇಷ್ಟ ಬಂದಂತೆಯೇ ಬದುಕ್ತಾರೆ. ಹೀಗಿರುವ ಉರ್ಫಿ ಜಾವೇದ್, ತನ್ನದೇ ಮುಸ್ಲಿಂ ಸಮುದಾಯದಿಂದ ತಾನು ಎದುರಿಸುತ್ತಿರುವ ಟೀಕೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾಳೆ, ಇಸ್ಲಾಂ ಧರ್ಮದವರ ಮನಸ್ಥಿತಿಯ ಬಗ್ಗೆ ಮಾತನಾಡಿದ್ದಾಳೆ.

ಹೌದು.. ಗುಂಡು ಹೊಡೆತಂದೆ ಉರ್ಫಿ ಜಾವೇದ್‌ ಸ್ಟೇಟ್‌ಮೆಂಟ್‌ ನೀಡಿದ್ದಾಲೆ. ನನಗೆ ಇಸ್ಲಾಂ ಮೇಲೆ ನಂಬಿಕೆ ಇಲ್ಲ. ನಾನು ಮುಸ್ಲಿಂ ಮಹಿಳೆಯಾಗಿದ್ದರೂ, ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ ಅಂತಾ ಬಾಲಿವುಡ್‌ ನಟಿ ಉರ್ಫಿ ಜಾವೆದ್ ಬೋಲ್ಡ್ ಹೇಳಿಕೆ ನೀಡಿದ್ದಾಳೆ. ನಾನು ಮುಸ್ಲಿಂ ಹುಡುಗಿ.. ನನಗೆ ಬರುವ ಹೆಚ್ಚಿನ ದ್ವೇಷದ ಕಾಮೆಂಟ್‌ಗಳು ಮುಸ್ಲಿಂಮರಿಂದಲೇ ಬಂದಿವೆ.. ನಾನು ಇಸ್ಲಾಂನ ಪಾವಿತ್ರ್ಯಕ್ಕೆ ಕಳಂಕ ತರುತ್ತಿದ್ದೇನೆ ಅಂತಾ ಹೇಳ್ತಾರೆ.. ಅಷ್ಟೇ ಅಲ್ಲ ಮುಸ್ಲಿಂ ಪುರುಷರು, ಮಹಿಳೆಯರು ನಾವು ಹೇಳಿದ ರೀತಿಯಲ್ಲಿ ಬದುಕಬೇಕು ಅಂತಾ ಬಯಸುತ್ತಾರೆ. ಹೀಗಾಗಿಯೇ ಅವರು ನನ್ನನ್ನು ದ್ವೇಷಿಸುತ್ತಾರೆ.. ಸಮುದಾಯದ ಎಲ್ಲಾ ಮಹಿಳೆಯರನ್ನು ನಿಯಂತ್ರಿಸುವ ಮನಸ್ಥಿತಿ ಮುಸ್ಲಿಂ ಪುರುಷರಲ್ಲಿದೆ ಎಂದು ಹೇಳಿರೋದು ಸಂಚಲನ ಸೃಷ್ಟಿಸಿದೆ.

ಇಸ್ಲಾಂ ಬಗ್ಗೆ ಬೋಲಡ್‌ ಹೇಳಿಕೆ ನೀಡಿರುವ ಉರ್ಫಿ ಜಾವೇದ್‌, ತಮ್ಮ ಮದುವೆ ಬಗ್ಗೆಯೂ ಮಾತನಾಡಿದ್ದಾಳೆ.. ನಾನು ಎಂದಿಗೂ ಮುಸ್ಲಿಂ ವ್ಯಕ್ತಿಯನ್ನ ಮದುವೆಯಾಗಲ್ಲ. ನಾನು ಇಸ್ಲಾಂನಲ್ಲಿ ನಂಬಿಕೆ ಇಟ್ಟಿಲ್ಲ. ಆದರೆ ನನ್ನ ತಂದೆ ತುಂಬಾ ಸಂಪ್ರದಾಯವಾದಿ ವ್ಯಕ್ತಿ. ನಾನು 17 ವರ್ಷದವಳಾಗಿದ್ದಾಗ ಅವರು ನನ್ನನ್ನು ಮತ್ತು ನನ್ನ ಒಡಹುಟ್ಟಿದವರನ್ನು ನಮ್ಮ ತಾಯಿಯ ಬಳಿ ಬಿಟ್ಟು ಹೋದರು. ನಾನು ಈಗ ಭಗವದ್ಗೀತೆಯನ್ನು ಓದುತ್ತಿದ್ದೇನೆ. ನಾನು ಹಿಂದೂ ಧರ್ಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೇನೆ ಅಂತಾ ಹೇಳಿದ್ದಾರೆ.

ಧರ್ಮದೊಳಗಿನ ಅಸಮಾನತೆ ಬಿಚ್ಚಿಟ್ಟಿರುವ ಬಾಲಿವುಡ್‌ ನಟಿ, ನೀವು, ನಿಮ್ಮ ಹೆಂಡತಿ ಮತ್ತು ಮಕ್ಕಳ ಮೇಲೆ ನಿಮ್ಮ ಧರ್ಮವನ್ನು ಒತ್ತಾಯಪೂರ್ವಕವಾಗಿ ಹೇರಬೇಡಿ. ಅದು ಹೃದಯದಿಂದ ಬರಬೇಕು, ಇಲ್ಲದಿದ್ದರೆ ಯಾರೂ ಸಂತೋಷವಾಗಿರುವುದಿಲ್ಲ ಎಂದಿದ್ದಾರೆ. ಇಸ್ಲಾಂ ಮೂಲಭೂತವಾದದ ಬಗ್ಗೆ ಮುಸ್ಲಿಂ ಮಹಿಳೆಯರೇ ಬಾಯ್ಬಿಟ್ಟಿದ್ದಾಳೆ. ಸಮುದಾಯದಲ್ಲಿ ಮಹಿಳೆಯರಿಗೆ ಹೇಗಲ್ಲಾ ದೌರ್ಜನ್ಯವಾಗ್ತಿದೆ ಎನ್ನವುದನ್ನ ಹೇಳಿದ್ದಾರೆ. ತಮ್ಮ ಚಿತ್ರ-ವಿಚಿತ್ರ ಉಡುಪಿಗಳಿಂದಲೇ ಫೇಮಸ್‌ ಆಗಿರುವ ಉರ್ಫಿ ಜಾವೇದ್‌, ಈಗ ಮುಸ್ಲಿಂ ಪುರುಷರು ಮತ್ತು ಇಸ್ಲಾಂ ಕುರಿತು ಮಾತನಾಡಿದ್ದಾಳೆ.. ಪುರುಷ ಪ್ರಧಾನ ಸಮಾಜ, ಇಸ್ಲಾಂನಲ್ಲಿನ ನೂನ್ಯತೆ ಪ್ರಸ್ತಾಪಿಸಿ ತನ್ನ ಅಸಮಾಧಾನ ಹೊರಹಾಕಿದ್ದಾಳೆ. ಏನೆ ಇರಲಿ.. 21ನೇ ಶತಮಾನದಲ್ಲಿ ಮುಸ್ಲಿಂಮರಲ್ಲಿ ಮಹಿಳೆಯರ ಶೋಷಣೆ ನಡೆಯುತ್ತಿದೆ.. ಇಸ್ಲಾಂ  ಹೆಸರಲ್ಲಿ ಮಾತಬಾರದ ಕೆಲಸ ನಡೆಯುತ್ತಿವೆ ಅದ್ರೂ ತಪ್ಪಲ್ಲ.