ಕರ್ನಾಟಕ

ಸಿಗುತ್ತಿಲ್ಲ ಉಚಿತ ಭಾಗ್ಯಗಳು - ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಅನ್ನಭಾಗ್ಯ ಹಣ, ಗೃಹಲಕ್ಷ್ಮಿ ನಿಧಿ ವಿಳಂಬಕ್ಕೆ ಜನಾಕ್ರೋಶ

ಬೆಂಗಳೂರು: ಎಲ್ಲಿ ಭಾಗ್ಯಗಳು ? ರಾಜ್ಯ ಸರ್ಕಾರ ಅಧಿಕಾರ ಹಿಡಿದ ಮೇಲೆ ಜನರನ್ನ ಮರೆತಿದೆ. ಉಚಿತ ಭಾಗ್ಯಗಳಾದ ಅನ್ನಭಾಗ್ಯ ಹಣ, ಗೃಹಲಕ್ಷ್ಮಿ ನಿಧಿ ವಿಳಂಬಕ್ಕೆ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದರು. 

ಪಕ್ಷ, ಸರ್ಕಾರದ ಒಳಗೆ‌ ಗ್ಯಾರಂಟಿ ಮುಂದುವರೆಸುವ ಚರ್ಚೆ ನಡೀತಿದೆ. ಹೀಗಾಗಿ ಜನರಿಗೂ ಗ್ಯಾರಂಟಿಗಳ ಮುಂದುವರಿಕೆ ಬಗ್ಗೆ ಅನುಮಾನಗಳು ಮೂಡಿವೆ. ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ಇಟ್ಟಿದೆ ಅಂತ ಹೇಳುತ್ತಿದ್ದಾರೆ. ಅಷ್ಟು ಹಣ ಇಟ್ಟ ಮೇಲೆ ಅದು ಜನರಿಗೆ ತಲುಪಬೇಕಲ್ಲ..? ಯಾಕೆ ತಲುಪ್ತಿಲ್ಲ..? , ಹಣ ಎಲ್ಲಿ ಹೋಯಿತು..? ಸಮಯಕ್ಕೆ ಸರಿಯಾಗಿ ಜನಕ್ಕೆ ಹಣ ಯಾಕೆ ಮುಟ್ತಿಲ್ಲ..? . ಇದಕ್ಕೆಲ್ಲ ಉತ್ತರ ಇಲ್ಲ, ಈ ಸರ್ಕಾರದಲ್ಲಿ ಲೂಟಿ ನಡೀತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. 

ಸರ್ಕಾರದ ಒಳಗೇ ಗ್ಯಾರಂಟಿ ಹಣ ಸೋರಿ ಹೋಗುತ್ತಿದೆ. ಗ್ಯಾರಂಟಿಗೆ ಇಟ್ಟ ಹಣ ಎಲ್ಲಿ ಸೋರಿ ಹೋಗ್ತಿದೆ? ಯಾರು ಸೋರಿಕೆ ಮಾಡ್ತಿದ್ದಾರೆ..? ಕಾಂಗ್ರೆಸ್ ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲ. ಈ ಸರ್ಕಾರದ ಜನರೆದುರು ಎಕ್ಸ್‌ಪೋಸ್ ಆಗಿದೆ, ಜನರೆದುರು ಕಾಂಗ್ರೆಸ್ ನಗೆ ಪಾಟಲಿಗೆ ಈಡಾಗಿದೆ. ಬಜೆಟ್ ನಲ್ಲಿ ಗ್ಯಾರಂಟಿ ಬಗ್ಗೆ ಎಷ್ಟು ಸತ್ಯ ಇತ್ತು ಅಂತ ಈಗ ಗೊತ್ತಾಗ್ತಿದೆ. ಕಳೆದ‌ಸಲದ ಬಜೆಟ್ ನಲ್ಲಿ 40% ಹಣ ಇನ್ನೂ ಕರ್ಚು ಮಾಡಿಲ್ಲ. ಕಾಂಗ್ರೆಸ್ ಕಳಪೆ ಬಜೆಟ್ ಕೊಟ್ಟಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿಗಳು ಜನರಿಗೆ ತಲುಪ್ತಿಲ್ಲ. ದೆಹಲಿ ಸೋಲಿನ ನಂತರ ಕಾಂಗ್ರೆಸ್ ಹೀಗಾಗಿದೆ. ಜನ ಅವರಿಗೆ ದೆಹಲಿಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ.  ಕಾಂಗ್ರೆಸ್ ಗೆ ನಾನು ಕೊಟ್ಟ ಚಡ್ಡಿಯೇ ಭದ್ರ ಈಗ  ಎಂದು ವ್ಯಂಗ್ಯವಾಡಿದರು. 

ಇನ್ನೂ , ನಾನು ಕೊಟ್ಟ ಚಡ್ಡಿ‌ ನಿಮ್ಮ ಮಾನ ಮರ್ಯಾದೆ ಉಳಿಸುತ್ತೆ ಅಲ್ಲದೇ ಇದಕ್ಕಿಂತಲೂ ಹೆಚ್ಚೇನಾದ್ರೂ ಮಾಡಿದ್ರೆ ಜನ ಆ ಚಡ್ಡಿಯನ್ನೂ ಬಿಚ್ತಾರೆ ಹುಷಾರ್  ಎಂದು ನಾರಾಯಣಸ್ವಾಮಿ ಕಿಡಿಕಾರಿದರು.