ತುಮಕೂರು - ತುಮಕೂರು ಶ್ರೀ ಸಿದ್ದಗಂಗಾ ಮಠಕ್ಕೆ ೭೦ ಲಕ್ಷ ವಿದ್ಯುತ್ ಬಿಲ್ ಪಾವತಿಸುವಂತೆ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಸರ್ಕಾರ ಬರೋಬ್ಬರಿ ೭೦ ಲಕ್ಷ ಬಿಲ್ ಪಾವತಿಗೆ ಸಚಿವ ಸಂಪುಟದಿಂದ ಸದಸ್ಯರಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸಚಿವ ಎಂ.ಬಿ. ಪಾಟೀಲ್ ಬೆಳಗಾವಿ ಅಧಿವೇಶನ ಪ್ರವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ , ವಿದ್ಯುತ್ ಬಿಲ್ ಪಾವತಿ ನೋಟಿಸ್ ಬಗ್ಗೆ ಪರಿಶೀಲಿಸಲಾಗುವುದು. ವಿದ್ಯುತ್ ಜೊತೆಗೆ ನೀರು ಬಳಸಲು ಸಹ ಅವಕಾಶ ಇದೆ. ಇನ್ನೂ , ಅವಕಾಶ ಇದ್ದರೆ ತಪ್ಪದೇ ವಿದ್ಯುತ್ ಬಿಲ್ ಸಹ ಮನ್ನಾ ಮಾಡಲಾಗುವುದು ಎಂದಿದ್ದಾರೆ. ಇನ್ನೂ ಸಂಬಂಧ ಪಟ್ಟ ಇಲಾಖೆ ಏನು ಕ್ರಮ ಕೈಗೊಳ್ಳುತ್ತದೆ ಅನ್ನೊದು ಕಾದು ನೋಡ ಬೇಕಿದೆ.