ಫೋನ್ ಪೇ ಮೂಲಕ ಲಂಚ ಪಡೆದಿದ್ದ ಮೂವರು ಅಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ. ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ತಹಶೀಲ್ದಾರ್ ಶ್ರೀನಿವಾಸ್, ಅಂತರಸಂತೆ ನಾಡ ಕಚೇರಿಯ ರೆವೆನ್ಯೂ ಇನ್ಸ್ಪೆಕ್ಟರ್ ಗೋವಿಂದರಾಜು, ಎನ್.ಬೆಳ್ತೂರು ಗ್ರಾಮ ಲೆಕ್ಕಿಗ ನಾಗರಾಜು ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಮೊದಲ ಹಂತವಾಗಿ 5 ಸಾವಿರ ಫೋನ್ ಪೇ ಮೂಲಕ ಲಂಚ ಪಡೆದ ಆರೋಪ ದಾಖಲಾಗಿತ್ತು. ಗುಂಡತ್ತೂರು ಗ್ರಾಮದ ಸರ್ವೆ ನಂ10 ರಲ್ಲಿ 5 ಎಕರೆ 1 ಗುಂಟೆ ಭೂಮಿ ವಿಚಾರವಾಗಿ, ಹೆಚ್.ಡಿ.ಕೋಟೆಯ ಬಿ.ವಿ.ಮಮತಾ ಕುಮಾರಿ ಎಂಬವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಆಸ್ತಿ ಪರಭಾರೆ ಮಾಡಿದ್ದರು ಎನ್ನಲಾಗಿದೆ. ಆಸ್ತಿ ಹಂಚಿಕೆ ಮಾಡಿ ಮಾರಾಟ ಮಾಡಲು ಅನುವು ನೀಡಿದ್ದು, ಬಳಿಕ ಹಿಂದಿನಂತೆ ದಾಖಲೆಗಳ ಯತಾಸ್ಥಿತಿ ಕಾಪಾಡಿಕೊಳ್ಳುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದೀಗ ಲಂಚ ಸ್ವೀಕರಿಸಿದ ಅಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ.