ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ದೊಡ್ಡಮಧುರೆ ಗ್ರಾಮದಲ್ಲಿ, ಬೆಳ್ಳಂಬೆಳಗ್ಗೆಯೇ ತೋಟದ ಮನೆಗೆ ನುಗ್ಗಿ ಕಳ್ಳರು ದರೋಡೆ ಮಾಡಿದ್ದಾರೆ. ಗ್ರಾಮದ ಚನ್ನೇಗೌಡ ಮನೆಗೆ ನುಗ್ಗಿದ ದರೋಡೆ ಗ್ಯಾಂಗ್, ವೃದ್ದ ದಂಪತಿಗಳಿದ್ದ ತೋಟದ ಮನೆ ಟಾರ್ಗೆಟ್ ಮಾಡಿ ಕೃತ್ಯ ನಡೆಸಿದ್ದಾರೆ. ಮನೆಯಲ್ಲಿದ್ದ ಚನ್ನೇಗೌಡ ಎಂಬ ವೃದ್ಧನ ಮೇಲೆ ಹಲ್ಲೆ ಮಾಡಿ ಒಡವೆ, ಮೊಬೈಲ್, ಹಣ ದೋಚಿ ಪರಾರಿಯಾಗಿದ್ದಾರೆ. ಸುಮಾರು ಎರಡು ಲಕ್ಷ ಮೌಲ್ಯದ ಒಡವೆ ಹಣ ದೋಚಿರುವ ಶಂಕೆ ವ್ಯಕ್ತವಾಗುತ್ತಿದೆ. ಮೊಲ ಹಿಡಿಯುವ ನೆಪದಲ್ಲಿ ತೋಟಕ್ಕೆ ಎಂಟ್ರಿ ಕೊಟ್ಟಿದ್ದ ಕಳ್ಳರ ಗ್ಯಾಂಗ್ ಈ ಕೃತ್ಯ ಎಸಗಿದೆ. ಗಾಯಗೊಂಡ ಚನ್ನೇಗೌಡರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ದರೋಡೆ ಸುದ್ದಿ ತಿಳಿದು ದೊಡ್ಡಮಧುರೆ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅಮೃತೂರು ಪೋಲಿಸರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.