ವೈರಲ್

ಹಂದಿ ಜೋಗಿ ವಾಸಸ್ಥಳಕ್ಕೆ ಉಪಲೋಕಾಯುಕ್ತರ ಭೇಟಿ ವೇಳೆ ಭಿಕ್ಷೆ ಬೇಡಿದ ವೃದ್ಧೆ

ಹಂದಿಜೋಗಿ ಕುಟುಂಬಗಳು ಸಾರ್ವಜನಿಕ ಕುಂದು ಕೊರತೆ ಅಹವಾಲು‌ ಸ್ವೀಕಾರ ಸಭೆಯಲ್ಲಿ ಮನವಿ ಮಾಡಿದ್ದರು. ಉಪಲೋಕಾಯುಕ್ತ ಬಿ. ವೀರಪ್ಪ ಅವರು ಹಂದಿ ಜೋಗಿ ವಾಸಸ್ಥಳದ ಪರಿಶೀಲನೆಗೆ ತೆರಳಿದ್ದ ವೇಳೆ‌ ವೃದ್ದೆ ಭಿಕ್ಷೆ ಬೇಡಿ‌ದ್ದಾಳೆ. ಇದೇ ವೇಳೆ ಉಪಲೋಕಾಯುಕ್ತರು ವೃದ್ದೆಯ ಪೂರ್ವ ಪರ ವಿಚಾರಿಸಿದ್ದಾರೆ. ಬಳಿಕ ವೃದ್ದೆ ಅಂಗಲಾಚುತ್ತಿದ್ದನ್ನ ಕಂಡು ಹಣ ನೀಡಿದ್ದಾರೆ.

ತುಮಕೂರು : ವಿಶೇಷ ಚೇತನ ವೃದ್ದೆ ಒಬ್ಬರು ಉಪಲೋಕಾಯುಕ್ತರೆದುರೇ ಭಿಕ್ಷೆ ಬೇಡಿದ್ದಾಳೆ. ಉಪಲೋಕಾಯುಕ್ತರಿಗೆ ಹಂದಿಜೋಗಿ ಕುಟುಂಬಗಳ ನರಕ ಸದೃಷ ಜೀವನ ದರ್ಶನ ಮಾಡಿದ ಘಟನೆಯೊಂದು ತುಮಕೂರು‌ ಜಿಲ್ಲೆಯ ಗುಬ್ಬಿ ನಗರದಲ್ಲಿ ನಡೆದಿದೆ. ಭಿಕ್ಷೆ ಕೇಳಿದ ವಿಶೇಷ ಚೇತನ ವೃದ್ದೆಗೆ ಉಪಲೋಕಾಯುಕ್ತ ಬಿ‌. ವಿರಪ್ಪ ಅವರು ಹಣ ನೀಡಿದ್ದಾರೆ. ಹಂದಿಜೋಗಿ ಕುಟುಂಬಗಳು ಮೂಲಭೂತ ಸೌಕರ್ಯವಿಲ್ಲದೆ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳ ಕಲ್ಪಿಸಿಕೊಡುವಂತೆ ಉಪಲೋಕಾಯಕ್ತರಿಗೆ ಮನವಿ ಮಾಡಿದ್ದರು.

ಹಂದಿಜೋಗಿ ಕುಟುಂಬಗಳು ಸಾರ್ವಜನಿಕ ಕುಂದು ಕೊರತೆ ಅಹವಾಲು‌ ಸ್ವೀಕಾರ ಸಭೆಯಲ್ಲಿ ಮನವಿ ಮಾಡಿದ್ದರು. ಉಪಲೋಕಾಯುಕ್ತ ಬಿ. ವೀರಪ್ಪ ಅವರು ಹಂದಿ ಜೋಗಿ ವಾಸಸ್ಥಳದ ಪರಿಶೀಲನೆಗೆ ತೆರಳಿದ್ದ ವೇಳೆ‌ ವೃದ್ದೆ ಭಿಕ್ಷೆ ಬೇಡಿ‌ದ್ದಾಳೆ. ಇದೇ ವೇಳೆ ಉಪಲೋಕಾಯುಕ್ತರು ವೃದ್ದೆಯ ಪೂರ್ವ ಪರ ವಿಚಾರಿಸಿದ್ದಾರೆ. ಬಳಿಕ ವೃದ್ದೆ ಅಂಗಲಾಚುತ್ತಿದ್ದನ್ನ ಕಂಡು ಹಣ ನೀಡಿದ್ದಾರೆ. ಕೂಡಲೇ ಮೂಲಭೂತ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಉಪಲೋಕಾಯ್ತರಿಗೆ ಕಾನೂನು ಸೇವಾಪ್ರಾಧಿಕಾರದ ನ್ಯಾಯಾದೀಶೆ ನೂರುನ್ನಿಸಾ ಸಾಥ್ ನೀಡಿದ್ದಾರೆ.