ಕರ್ನಾಟಕ

ಹುಲಿ ಉಗುರು ಸಾಗಾಟ: ಓರ್ವನ ಬಂಧನ

ನೆರೆಯ ತಮಿಳುನಾಡಿಗೆ ಹುಲಿ ಉಗುರು ಸಾಗಿಸುತ್ತಿದ್ದ ಓರ್ವ ಆರೋಪಿಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಚಾಮರಾಜನಗರ : ನೆರೆಯ ತಮಿಳುನಾಡಿಗೆ ಹುಲಿ ಉಗುರು ಸಾಗಿಸುತ್ತಿದ್ದ ಓರ್ವ ಆರೋಪಿಯನ್ನ ಅರಣ್ಯ ಇಲಾಖೆ ಸಿಬ್ಬಂದಿ  ಬಂಧಿಸಿದ್ದಾರೆ. ಗಡಿ ಚಾಮರಾಜನಗರದ ಪುಣಜನೂರು ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಈ ವ್ಯಾಪ್ತಿಗೆ ಬರುವ ಬೂದಿಪಡಗ ಗ್ರಾಮದ ಚಿಕ್ಕಮಾದ ಎಂಬಾತನೇ ಆರೋಪಿಯಾಗಿದ್ದಾನೆ. 

ನೆರಯ ರಾಜ್ಯದ ತಮಿಳುನಾಡಿಗೆ ಐದು ಹುಲಿ ಉಗುರುಗಳನ್ನ ಸಾಗಿಸ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿ ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ. 
ಸದ್ಯ ಬಂಧಿತ ಆರೋಪಿಯಿಂದ ಐದು ಹುಲಿ ಉಗುರುಗಳನ್ನ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನ ನ್ಯಾಯಾಂಗ  ಬಂಧನಕ್ಕೆ ಒಪ್ಪಿಸಲಾಗಿದೆ.