ಹಾಸನ - ಪವಾಡ ದೇವತೆ ಹಾಸನದ ಹಾಸನಾಂಬೆ ದೇವಿಯ ದರ್ಶನಕ್ಕೆ ಇಂದು ಅಧಿಕೃತ ತೆರೆ ಬೀಳಲಿದೆ. ಹಾಸನಾಂಬೆ ವರ್ಷಕ್ಕೊಮ್ಮೆ ಮಾತ್ರ ದರ್ಶನಕ್ಕೆ ಅವಕಾಶವಿದ್ದು , ಇಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಅಧಿಕೃತವಾಗಿ ಮುಗಿಯಲಿದೆ.
ಹಾಸನ ಜಿಲ್ಲಾಡಳಿತ ದರ್ಶನದ ಮೊದಲ ದಿನ ಹಾಗೂ ಕಡೆಯ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಬಾರದೆಂದು ತೀರ್ಮಾನವಾಗಿದೆ. ಈ ಹಿನ್ನೆಲೆಯಲ್ಲಿ ನ.3 ರಂದು ಹಾಸನಾಂಬೆ ದರ್ಶನ ದೇಗುಲದ ಬಾಗಿಲು ಮುಚ್ಚಿದರೂ ,ಇಂದೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮುಕ್ತಾಯಗೊಳ್ಳಲಿದೆ.
ಪ್ರತಿ ವರ್ಷದ ಪದ್ಧತಿಯಂತೆ ಅಕ್ಕಿ, ತಾಜಾ ಪುಷ್ಪಗಳ ಅಲಂಕಾರ , ದಿವ್ಯ ಜ್ಯೋತಿ ಬೆಳಗಿಸುವ ಮೂಲಕ ಸರ್ವೇ ಜನ ಸುಖಿನೋ ಭವಂತು ಎಂದು ಪೂಜೆ ಮಾಡಿ ದೇಗುಲ ಬಾಗಿಲು ಮುಚ್ಚಲಿದೆ.