ಕರ್ನಾಟಕ

ವಿಧಾನಸೌಧದ ಆವರಣದಲ್ಲಿ ಪುಸ್ತಕಮೇಳ ಆಯೋಜನೆ : ಯು.ಟಿ ಖಾದರ್

ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನ ಕನ್ನಡ & ಸಂಸ್ಕೃತಿ ಇಲಾಖೆಯವರು ಅದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 5 ಜನರಿಗೆ ಪ್ರತಿಭಾ ಪುರಸ್ಕಾರ ಕೂಡ ಇದೆ. DPR ಸ್ಟಾಲ್ ಹಾಕೋ ಅವಕಾಶ ಕೊಡುತ್ತೆ. ಅಪ್ಲಿಕೇಶನ್ ನೋಡಿ ಅವಕಾಶ ಕೊಡುತ್ತೆ. ಮಾರ್ಚ್ ಎರಡನೇ ತಾರೀಖಿನ ವರೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಇದ್ದು, 3ನೇ ತಾರೀಖು ಮಾತ್ರ ಶಾಸಕರ ಅವಕಾಶ ಇರುತ್ತೆ. ಇನ್ನೂ ಸ್ಟಾಲ್ ಹಾಕೋರಿಗೆ ಪ್ರೀ ಊಟದ ವ್ಯವಸ್ಥೆ ಮಾಡ್ತೀವಿ ಎಂದು ಯು.ಟಿ ಖಾದರ್‌ ತಿಳಿಸಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಪುಸ್ತಕಮೇಳ ಆಯೋಜಿಸಿದ್ದೇವೆ. ರಾಜ್ಯದ ವಿವಿಧ ಬುದ್ದಿ ಜೀವಿಗಳು & ಕವಿಗಳ ಚರ್ಚಾ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಫೆಬ್ರವರಿ 27ನೇ ತಾರೀಖು ಸಂಜೆ 5 ಗಂಟೆಗೆ ಪುಸ್ತಕ ಮೇಳ ಉದ್ಘಾಟನೆಯನ್ನ ಸಿಎಂ ಮಾಡಲಿದ್ದಾರೆ ಎಂದು ಸ್ಪೀಕರ್ ಯು.ಟಿ ಖಾದರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, ರಾಜ್ಯದ ವಿವಿಧ ಬುದ್ದಿ ಜೀವಿಗಳು & ಕವಿಗಳ ಚರ್ಚಾ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ ಅವರು ಇರ್ತಾರೆ. ಜೊತೆಗೆ ಗೋವಾ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಾಮೋದರ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 27, 28, 1, 2, 3 ತನಕ ಈ ಕಾರ್ಯಕ್ರಮ ಇರುತ್ತೆ. ಪ್ರತಿದಿನ ಕಲ್ಚರಲ್ ಕಾರ್ಯಕ್ರಮ ಕೂಡ ಇರುತ್ತೆ ಎಂದು ತಿಳಿಸಿದ್ದಾರೆ. 
ಇನ್ನೂ ಶಾಸಕರ ಅವರ ತಾಲ್ಲೂಕಿನಲ್ಲಿ ಲೈಬ್ರರಿಗೆ ಪುಸ್ತಕ ತೆಗೆದುಕೊಳ್ಳಲು ಎರಡು ಲಕ್ಷ ನೀಡಲಾಗುತ್ತೆ. ವಿಧಾನಸೌಧದಲ್ಲೇ ಶಾಸಕರು ತಮ್ಮ ಕ್ಷೇತ್ರ ಶಾಲೆ & ಲೈಬ್ರರಿಗೆ ಬೇಕಾದ ಪುಸ್ತಕ ಕೊಂಡುಕೊಳ್ಳಬೇಕು. ಕೊನೆದಿನ ರಾಜ್ಯಪಾಲರನ್ನ ನಾವು ಆಹ್ವಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 

ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನ ಕನ್ನಡ & ಸಂಸ್ಕೃತಿ ಇಲಾಖೆಯವರು ಅದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 5 ಜನರಿಗೆ ಪ್ರತಿಭಾ ಪುರಸ್ಕಾರ ಕೂಡ ಇದೆ. DPR ಸ್ಟಾಲ್ ಹಾಕೋ ಅವಕಾಶ ಕೊಡುತ್ತೆ. ಅಪ್ಲಿಕೇಶನ್ ನೋಡಿ ಅವಕಾಶ ಕೊಡುತ್ತೆ. ಮಾರ್ಚ್ ಎರಡನೇ ತಾರೀಖಿನ ವರೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಇದ್ದು, 3ನೇ ತಾರೀಖು ಮಾತ್ರ ಶಾಸಕರ ಅವಕಾಶ ಇರುತ್ತೆ. ಇನ್ನೂ ಸ್ಟಾಲ್ ಹಾಕೋರಿಗೆ ಪ್ರೀ ಊಟದ ವ್ಯವಸ್ಥೆ ಮಾಡ್ತೀವಿ ಎಂದು ಯು.ಟಿ ಖಾದರ್‌ ತಿಳಿಸಿದ್ದಾರೆ.

ಕಾರ್ಯಕ್ರಮದ ವಿವರ :
- 2ನೇ ತಾರೀಖು ಸಂಜೆ ಸಾಧುಕೋಕಿಲ ಅವರಿಂದ ಸಂಗೀತ ಕಾರ್ಯಕ್ರಮ.
- 15 ವಿಚಾರ‌ದಲ್ಲಿ ಸಂವಾದ ಕಾರ್ಯಕ್ರಮ. 
- ಪ್ರತಿದಿನ 4 ಕಾರ್ಯಕ್ರಮ.. ಬೆಳಗ್ಗೆ ಎರಡು ಸಂಜೆ ಎರಡು ಕಾರ್ಯಕ್ರಮ ಆಯೋಜನೆ.
- ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಚಲನಚಿತ್ರ, ಮಕ್ಕಳ ಸಾಹಿತ್ಯ ಈ ರೀತಿ ವಿಚಾರ‌ಗಳ ಬಗ್ಗೆ ಸಂವಾದ.
- 28 ರಿಂದ ಪುಸ್ತಕಗಳ ಮಾರಾಟಕ್ಕೆ ಅವಕಾಶ.