ಬೆಳಗಾವಿ : ನಾವು ಯಾವುದೇ ಧರ್ಮಕ್ಕೆ ತೊಂದರೆ ಕೊಡೊವುದಿಲ್ಲ. ಆದರೆ ಗಣಪತಿ ಹೋಗುವಾಗ ಕಲ್ಲು ಎಸೆಯುತ್ತಾರೆ. ನಾಗಮಂಗಲದಲ್ಲಿ ಇಂದು ಎನಾಗಿದೆ ವಿಚಾರ ಮಾಡಿ ಎಂದು ಯತ್ನಾಳ್ ಕಿಡಿಕಾರಿದ್ದು, ಗಣಪತಿ ಅವರ ಮಸೀದಿಯ ಮುಂದೆ ಹೋಗಬಾರದಂತೆ. ಇದು ಹಿಂದೂಸ್ತಾನವಿದೆ ಮಕ್ಕಳೇ ಗಣಪತಿ ಎಲ್ಲಾ ಕಡೆ ಹೋಗುತ್ತೆ. ಇಂದು ಬೇರೆ ಸರ್ಕಾರ ಇದೆ ಮುಂದೆ ನಮ್ಮದು ಸರ್ಕಾರ ಬರೋದಿದೆ. ಎಲ್ಲಾದರೂ ಕಲ್ಲು ಬಿದ್ರೆ ಮುಂಜಾನೆ ಬುಲ್ಡೋಜರ್ ಬರುತ್ತೆ ಎಂದು ಯತ್ನನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಪಂಚಾಯ್ತಿ, ಜಿಪಂ ಎಲೆಕ್ಷನ್ ನಲ್ಲಿ ಜಾತಿ ಜಗಳಾಡಿ. ಆದರೆ ಎಂ ಪಿ, ಎಂ ಎಲ್ ಎ ಎಲೆಕ್ಷನ್ ಬಂದಾಗ ಗಟ್ಟಿಯಾಗಿ ನಿಲ್ಲಿ . ವಿಜಯಪುರದಲ್ಲಿ 2.80 ಲಕ್ಷ ಮತಗಳಿವೆ. ಅವರು 1.20 ಸಾವಿರ ಮತಗಳಿದ್ದಾವೆ. ನಮ್ಮವರು 1.60 ಸಾವಿರ ಮತಗಳಿವೆ. ಮೊದಲು ನಮ್ಮವರು ಹೊರಗೆ ಬಂದು ಮತವನ್ನೆ ಹಾಕುತ್ತಿರಲಿಲ್ಲ. ಅವರು ಅವರಿಗೆ ಹಾಕೋತಾರೆ ನಾವು ನಮಗೆ ಹಾಕೊಳ್ತಿವಿ. ನಾವು ನಿಮ್ಮ ಮತವೂ ಬೇಡ ನೀವು ಮನೆಗೂ ಬರಬೇಡಿ ಎಂದು ಹೇಳಿರುವೆ. 2018 ರಲ್ಲಿ ಆಸಿರಿ ಬಂದ ನಂತರ ಅವರಿಗೆ ಹೇಳಿದ್ದೆ. ನಾನು ಹೇಗೆ ಆರಿಸಿ ಬರ್ತಿರಬೇಕು ನೀವೆ ವಿಚಾರ ಮಾಡಿ ಎಂದು ಹೇಳಿದ್ದರಂತೆ ಯತ್ನಾಳ್.
ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಅವರು, ಇಡೀ ಹಿಂದೂಸ್ತಾನ, ಬೆಂಗಳೂರು ವಿಧಾನಾಸೌಧ ಅವರದ್ದೆ ಅಂತಾರೆ, ಜಮೀರ್ ಅಹ್ಮದ್ ಹೇಳ್ತಾನೆ ಕರ್ನಾಟಕದಲ್ಲಿ 1 ಲಕ್ಷ 11 ಸಾವಿರ ಎಕರೆ ನಮ್ಮದಿದೆ ಅಂತ ಹೇಳ್ತಾನೆ.
ಆಳಂದ ಪೊಲೀಸ್ ಹೆಡ್ ಕ್ವಾಟರ್ಸ್ ಕಟ್ಟಿದ್ದೆಲ್ಲವೂ ಅವರದ್ದಂತೆ. ಅದರಲ್ಲಿ ಹಿಂದೂಗಳು ಕಟ್ಟಿಕೊಡ ಆಸ್ತಿಗೆ ಪರ್ಯಾಯ ಆಸ್ತಿ ಕೊಡಬೇಕಂತೆ. ಆಗ್ಲೆ ಗಾಂಧೀ ಕೊಟ್ಟಿದ್ದಾನೆ ಈಗ ಅವನೇ ಮತ್ತೊಂದು ಪಾಕಿಸ್ತಾನ ನಿರ್ಮಾಣ ಮಾಡಿಬಿಟ್ಟ. ಒಂದು ಪಾಕಿಸ್ತಾನ ಒಡೆದು ಕೊಟ್ಟ ಅದು 11 ಲಕ್ಷ ಎಕರೆ. ನಮ್ಮ ದೇಶದಲ್ಲಿ ವಕ್ಫ್ ಆಸ್ತಿಯೇ 12 ಎಕರೆ ಇದೆ ಎಂದು ಹೇಳಿದ್ದಾರೆ.
ಇಂಡಿಯನ್ ಮಿಲಿಟರಿ ಬಳಿ 18 ಲಕ್ಷ ಎಕರೆ ಇದೆ. ರೈಲ್ವೆ ಬಳಿ 15 ಲಕ್ಷ ಎಕರೆ ಇದೆ. ಅದನ್ನ ತೆಗೆದು ಪೂರ್ತಿ ದಲಿತರಿಗೆ ಹಂಚಿಬಿಡಿ ಎಂದು ಹೇಳಿದ್ದೆನೆ. ಇದಕ್ಕಾಗಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೆನೆ. ದಲಿತರಿಗೆ ಹಂಚಿದರೆ ದೇಶಕ್ಕೆ ವಿದೇಯಕರಾಗಿರ್ತಾರೆ. ಅವರಿಗೆ ಹಂಚಿದರೆ ಭಾರತ್ ಮಾತಾಕೀ ಕೈ ಅನ್ನಲ್ಲ. ವಂದೇ ಮಾತರಂ ಅನ್ನಲ್ಲ ಈ ರೀತಿ ನಮ್ಮ ದೇಶದ ಪರಿಸ್ಥಿತಿ ಆಗಿದೆ. ನಾವು ಹೀಗೆ ಹೋದರೆ ಭಾರತ ಪಾಕಿಸ್ತಾನ ಆಗುತ್ತೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.