ಬಾಗಲಕೋಟೆ : ನಾಗಮಂಗಲದಲ್ಲಿ ಗಲಭೆಯ ಬೆಂಕಿ ಅರುವ ಮುನ್ನವೇ ಇದೀಗ ಬಾಗಲಕೋಟೆಯಲ್ಲಿ ಯುವಕನೊಬ್ಬ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಪಾಕಿಸ್ತಾನದ ಧ್ವಜವಿರುವ ಸ್ಟೇಟಸ್ ಹಾಕಿ ಪುಂಡಾಟ ಮೆರೆದಿದ್ದಾನೆ. ಇದೀಗ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು, ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮದ ಯುವಕ ತೌಶೀಪ್ ಮೆಹ್ತರ್ ಬಂಧಿತ ಆರೋಪಿ, ಪಾಕಿಸ್ತಾನ ಪರ ವಾಟ್ಸಾಪ್ ಸ್ಟೇಟಸ್ ಹಾಕಿ ಪುಂಡತನ ಮೆರೆದಿದ್ದಾನೆ. ಯಾವುದೋ ವಾಹನದ ಮೇಲೆ ಪಾಕಿಸ್ತಾನದ ಧ್ವಜ ಹಾರಾಡುತ್ತಿರುವ ವಿಡಿಯೋದ ತುಣುಕನ್ನು ಸ್ಟೇಟಸ್ ಇಟ್ಟುಕೊಂಡಿದ್ದಾನೆ. ಇದೀಗ ತೌಶೀಪ್ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಹಿಂದೂ ಕಾರ್ಯಕರ್ತರು ಕಿಡಿಕಾರಿದ್ದಾರೆ. ಈ ಹಿನ್ನೆಲೆ ಎಚ್ಚೆತ್ತ ಕಲಾದಗಿ ಪೊಲೀಸರು ಆರೋಪಿ ತೌಶೀಪ್ನನ್ನು ವಶಕ್ಕೆ ಪಡೆದಿದ್ದಾರೆ.