ಬೆಂಗಳೂರು : ಕುಶಾಲನಗರದ ವಾಲ್ನೂರು ಎಂಬ ಸಣ್ಣದೊಂದು ಹಳ್ಳಿ. ಹಸಿರೆಲೆಗಳ ನಡುವೆ ಬೆಳೆದ ಪುಟ್ಟ ಹುಡುಗ ಮಂಜುನಾಥ್.
ಬಾಲಕನಿದ್ದಾಗಲೇ ತಾನೊಬ್ಬ ದೊಡ್ಡ ಚಿತ್ರಕಲಾಕಾರನಾಗಬೇಕು ಅನ್ನೋ ಮಹದಾಸೆಯನ್ನ ಹೊತ್ತುಕೊಂಡಂತಹ ಮಂಜುನಾಥ್ ಇದೀಗ ಪೊಲೀಸ್ ಸಬ್ ಇನ್ಸ್ ಪೆಕ್ಟರ್. ಬೆಂಗಳೂರಿನ ಬನಶಂಕರಿ, ಗಿರಿನಗರ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿರುವ ಮಂಜುನಾಥ್ ಪೊಲೀಸ್ ಎಂಬ ನೆಲೆಯ ಜತೆ ಕಲೆಯನ್ನೂ ಕೂಡ ಪೋಷಿಸಿಕೊಂಡು ಬಂದಿದ್ದಾರೆ.
ಚಿತ್ರ ಬಿಡಿಸೋದು ಅಂದ್ರೆ ಅಷ್ಟು ಸುಲಭವಲ್ಲ. ಕಲಾದೇವಿಯ ವರದಾನ ಇಲ್ಲದೇ ಹೋದ್ರೆ ಎಂತಹ ವ್ಯಕ್ತಿಯೂ ನಗಣ್ಯನೇ. ಆದ್ರೆ, ಮಂಜುನಾಥ್ ರಿಗೆ ಬಾಲ್ಯದಲ್ಲೇ ಕರಗತವಾದ ಚಿತ್ರಕಲೆ ಇದೀಗ ಹೆಮ್ಮರವಾಗಿ ಅವರನ್ನಪ್ಪಿದೆ. ಮಂಜುನಾಥ್ ಖಾಲಿ ಹಾಳೆಯ ಮೇಲೆ ಬಣ್ಣದ ಬ್ರೆಷ್ಶಿನಲ್ಲಿ ಅರಳಿದ ಚಿತ್ರಗಳು ಜೀವಂತದಲ್ಲೂ ಜೀವಂತವೇ ಅನ್ನೋ ರೀತಿ ಕಾಣಿಸುತ್ತದೆ.
ಕಾನೂನು-ಸುವ್ಯವಸ್ಥೆಯ ಪರಿಪಾಠದಲ್ಲಿ ಬ್ಯುಸಿಯಾಗಿದ್ದರೂ ಬಿಡುವಿನ ಬಡತನದಲ್ಲಿ ಕಲೆಯನ್ನ ಶ್ರೀಮಂತವಾಗಿ ಉಳಿಸುವ ಕೆಲಸವನ್ನ ಮಂಜುನಾಥ್ ಮಾಡುತ್ತಿದ್ದಾರೆ. ಹವ್ಯಾಸ ಅನ್ನೋದು ಒಂದೊಂದು ರೀತಿಯಾಗಿ ಒಬ್ಬೊಬ್ಬರನ್ನ ಕಾಡುತ್ತೆ. ಆದರೆ, ಮಂಜುನಾಥ್ ರ ಪಾಲಿಗೆ ಚಿತ್ರಕಲೆ ಹವ್ಯಾಸವಾಗಿಲ್ಲ ಅದು ಉಸಿರಾಗಿದೆ. ಹಾಗಾದ್ರೆ, ಮಂಜುನಾಥ್ ರ ಕೈಯಲ್ಲರಳಿದ ಕಲಾಕುಂಚ ಹೇಗಿದೆ ಎಂಬುದನ್ನ ನೀವೇ ನೋಡಿ.