ವೈರಲ್

ತುಮಕೂರು ದಸರಾದಲ್ಲಿ ಸಿಂಗರ್ ಆದ ಪರಮೇಶ್ವರ್

ಪರಮೇಶ್ವರ್ ಅವರು ಹಗಲು ಡ್ಯಾನ್ಸರ್, ರಾತ್ರಿ ಸಿಂಗರ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ತುಮಕೂರು ದಸರಾ ಸರ್ಕಾರದ ವತಿಯಿಂದ ಆಯೋಜನೆಗೊಂಡಿತ್ತು.ಇದೇ ವೇಳೆ ಗ್ರಹ ಸಚಿವರು ದಸರಾ ಮೆರವಣಿಗೆಯಲ್ಲಿ ಟಪ್ಪಾಂಗುಚ್ಚಿ ಹಾಕಿದ್ದಾರೆ. ಈ ಕುತ ವಿಡಿಯೋ ಒಂದು ವೈರಲ್ ಆಗಿದೆ.

ತುಮಕೂರು : ಜಿಲ್ಲೆಯ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಗ್ರಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಪರಮೇಶ್ವರ್ ಅವರು ಹಗಲು ಡ್ಯಾನ್ಸರ್, ರಾತ್ರಿ ಸಿಂಗರ್ ಆಗಿದ್ದಾರೆ. 
ಇದೇ ಮೊದಲ ಬಾರಿಗೆ ತುಮಕೂರು ದಸರಾ ಸರ್ಕಾರದ ವತಿಯಿಂದ ಆಯೋಜನೆಗೊಂಡಿತ್ತು.ಇದೇ ವೇಳೆ ಗ್ರಹ ಸಚಿವರು ದಸರಾ ಮೆರವಣಿಗೆಯಲ್ಲಿ ಟಪ್ಪಾಂಗುಚ್ಚಿ ಹಾಕಿದ್ದಾರೆ. ಈ ಕುತ ವಿಡಿಯೋ ಒಂದು ವೈರಲ್ ಆಗಿದೆ.

ತಮಟೆ ಸದ್ದಿಗೆ ಪರಮೇಶ್ವರ್ ಮಸ್ತ್ ಡ್ಯಾನ್ಸ್ ಮಾಡಿದ್ದು, ಪರಮೇಶ್ವರ್ ಕುಣಿತಕ್ಕೆ ಅಭಿಮಾನಿಗಳು ಸಾಥ್ ನೀಡಿದ್ದಾರೆ. ತಾಯಿ ಚಾಮುಂಡೇಶ್ವರಿ ಅಂಬಾರಿ ಮುಂದೆ ಹೆಜ್ಜೆ ಹಾಕಿದ್ದಾರೆ. ಇನ್ನೊಂದೆಡೆ ಪರಮೇಶ್ವರ್ ಅವರು ರಾತ್ರಿ ದಸರಾ ಉತ್ಸವದಲ್ಲಿ ಸಿಂಗರ್ ಆಗಿದ್ದಾರೆ. 

ಡಾ. ಜಿ. ಪರಮೇಶ್ವರ್ ಅವರು ದಸರಾ ವೇದಿಕೆಯಲ್ಲಿ ಕಾಣದಂತೆ ಮಾಯವಾದನು ಶಿವ ಎಂದು ಹಾಡು ಹಾಡಿದ್ದಾರೆ.  ಗಾಯಕ ವಿಜಯಪ್ರಕಾಶ್ ಹಾಡಿದ ಹಾಡಿಗೆ ಧ್ವನಿಗೂಡಿಸಿದ್ದಾರೆ. ಕಾರ್ಯಕ್ರಮದಲ್ಲಿಯೂ ಹಾಡು ಹಾಡಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ಗೃಹ ಸಚಿವ ಪರಮೇಶ್ವರ್ ಹಾಡು ಹಾಡಿದ್ದಾರೆ. ತುಮಕೂರು ದಸರಾದಲ್ಲಿ ಗೃಹ ಸಚಿವ ಪರಮೇಶ್ವರ್ ಹವಾ ಜೋರಾಗಿದೆ.