ಕರ್ನಾಟಕ

ಪ್ರೇಮಿಗಳ ದಿನದಂದು ಪ್ರೇಮದ ಕಾಣಿಕೆಗೆ ಮರುಜೀವಕೊಟ್ಟ ಪವಿತ್ರಾ ಗೌಡ

ಪವಿತ್ರಾ ಗೌಡ ಅವರು ಜೈಲಿಗೆ ಹೋಗುತ್ತಿದ್ದಂತೆ ಅವರ ಪ್ರೀತಿಯ ರೆಡ್‌ ಕಾರ್ಪೆಟ್‌ ಸ್ಟೂಡಿಯೋದಲ್ಲಿ ಕೆಲಸಗಳೆಲ್ಲವು ನಿಂತು ಹೋಗಿದ್ದವು. ಸದ್ಯ ಪವಿತ್ರಾ ಗೌಡ ಜಾಮೀನಿನ ಮೇಲೆ ಸೆರೆಮನೆಯಿಂದ ಹೊರಬಂದಿದ್ದು, ಒಳ್ಳೆ ಗಳಿಗೆ ನೋಡಿಕೊಂಡು ರೆಡ್‌ ಕಾರ್ಪೆಟ್‌ ರೀಲಾಂಚ್‌ ಮಾಡಲು ಕಾದಿದ್ದರು.

ಬೆಂಗಳೂರು :   ಫೆಬ್ರವರಿ 14.. ಇಂದು ಪ್ರೇಮಿಗಳ ದಿನ.. ಈ ದಿನವನ್ನ ಯುವಕ ಯುವತಿಯರು ತುಂಬಾನೆ ಸ್ಪೆಷಲ್‌ಆಗಿ ಆಚರಣೆ ಮಾಡ್ತಾರೆ. ಇಂತಹ ಸಂದರ್ಭದಲ್ಲಿ ಪವಿತ್ರಾ ಗೌಡ ಅವರು ಕೂಡಾ ವಿಶೇಷವಾಗಿ ವ್ಯಾಲೆಂಟೈನ್ಸ್ ಡೇ ಆಚರಿಸಿದ್ದಾರೆ. ಪ್ರೇಮಿಗಳ ದಿನವೇ ಪ್ರೇಮದ ಕಾಣಿಕೆಯಾದ ರೆಡ್ ಕಾರ್ಪೆಟ್ ಸ್ಟೂಡಿಯೋಗೆ ಮರುಜೀವಕೊಟ್ಟಿದ್ದಾರೆ. 

ಪವಿತ್ರಾ ಗೌಡ ಅವರು ಜೈಲಿಗೆ ಹೋಗುತ್ತಿದ್ದಂತೆ ಅವರ ಪ್ರೀತಿಯ ರೆಡ್‌ ಕಾರ್ಪೆಟ್‌ ಸ್ಟೂಡಿಯೋದಲ್ಲಿ ಕೆಲಸಗಳೆಲ್ಲವು ನಿಂತು ಹೋಗಿದ್ದವು. ಸದ್ಯ ಪವಿತ್ರಾ ಗೌಡ ಜಾಮೀನಿನ ಮೇಲೆ ಸೆರೆಮನೆಯಿಂದ ಹೊರಬಂದಿದ್ದು, ಒಳ್ಳೆ ಗಳಿಗೆ ನೋಡಿಕೊಂಡು ರೆಡ್‌ ಕಾರ್ಪೆಟ್‌ ರೀಲಾಂಚ್‌ ಮಾಡಲು ಕಾದಿದ್ದರು. ಅದರಂತೆ ಇಂದು ಪ್ರೇಮಿಗಳ ದಿನವಾಗಿರೋದ್ರಿಂದ ಇಂದೇ ಸ್ಟೂಡಿಯೋವನ್ನ ರಿಲಾಂಚ್‌ ಮಾಡಿದ್ದಾರೆ. ಸರಳವಾಗಿ ಪೂಜೆ ಮಾಡುವ ‌ಮೂಲಕ ಪವಿತ್ರಾ ಗೌಡ ಅವರು ರೆಡ್ ಕಾರ್ಪೆಟ್ ರಿಲಾಂಚ್ ಮಾಡಿದ್ದಾರೆ. ಈ ಮೂಲಕ ಮತ್ತೆ ತಮ್ಮ ಬ್ಯುಸಿನೆಸ್ ಸಕ್ಸಸ್ಫುಲ್ ಆಗಿ ರನ್ ಮಾಡುವ ಭರವಸೆಯಲ್ಲಿದ್ದಾರೆ.