ದೇಶ

ಪವಿತ್ರಾಗೌಡ ಟೆಂಪಲ್‌ ರನ್‌.. ಕುಂಭಮೇಳದಲ್ಲಿ ʼಪವಿತ್ರʼ ಶಾಹಿ ಸ್ನಾನ

ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಪವಿತ್ರಾಗೌಡ, ಮೌನಿ ಅಮಾವಾಸ್ಯೆಯಂದು ಶಾಹಿ ಸ್ನಾನದ ಪುಣ್ಯ ಸಿಕ್ಕ ನಾನೇ ಧನ್ಯಳು. ನಾನು ಎಲ್ಲಾ ನಕಾರಾತ್ಮಕ ಶಕ್ತಿಯಿಂದ ಮುಕ್ತಳಾಗಿದ್ದೇನೆ ಎಂದು ನಂಬಿದ್ದೇನೆ. ಹರಹರ ಮಹಾದೇವ ಎಂದು ಬರೆದುಕೊಂಡಿದ್ದಾರೆ.

ಕೊಲೆ ಪ್ರಕರಣದಲ್ಲಿ ಜೈಲಿನಿಂದ ರಿಲೀಸ್‌ ಆದ ಬಳಿಕ ಸ್ಯಾಂಡಲ್‌ವುಡ್‌ ನಟಿ, ನಟ ದರ್ಶನ್‌ ಗೆಳತಿ ಪವಿತ್ರಾಗೌಡ ಟೆಂಪಲ್‌ ರನ್‌ ಮಾಡ್ತಿದ್ದಾರೆ. 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾಕುಂಭದಲ್ಲಿ ಇದೀಗ ಪವಿತ್ರಾಗೌಡ ಭಾಗಿಯಾಗಿದ್ದಾರೆ. ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಪವಿತ್ರಾಗೌಡ, ಮೌನಿ ಅಮಾವಾಸ್ಯೆಯಂದು ಶಾಹಿ ಸ್ನಾನದ ಪುಣ್ಯ ಸಿಕ್ಕ ನಾನೇ ಧನ್ಯಳು. ನಾನು ಎಲ್ಲಾ ನಕಾರಾತ್ಮಕ ಶಕ್ತಿಯಿಂದ ಮುಕ್ತಳಾಗಿದ್ದೇನೆ ಎಂದು ನಂಬಿದ್ದೇನೆ. ಹರಹರ ಮಹಾದೇವ ಎಂದು ಬರೆದುಕೊಂಡಿದ್ದಾರೆ.