ಕರ್ನಾಟಕ

ಅಮೇರಿಕಾ ಕ್ರಮಕ್ಕೆ ಮಂಡ್ಯ ಜನರ ಧರಣಿ

ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರನ್ನ ಅಕ್ರಮ ನಿರಾಶ್ರಿತರು

ಮಂಡ್ಯ - ನವದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಭಾರತೀಯರಿಗೆ ಕೈ ಕೋಳ ಹಾಕಿ ಅವಮಾನಿಸಿದ್ದಕ್ಕೆ ಖಂಡಿಸಿತು. ಬಿಜೆಪಿ ವಿರುದ್ಧ ಮಂಡ್ಯದಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಯಿತು. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆದ ಹೋರಾಟ ನಡೆಯಿತು. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರನ್ನ ಅಕ್ರಮ ನಿರಾಶ್ರಿತರು ಎಂದು ಗುರುತಿಸಲಾಗಿದೆ. ಅಕ್ರಮ ನಿರಾಶ್ರಿತರ ಹೆಸರಲ್ಲಿ ಕೈ ಕೋಳ ಹಾಕಿ ಅವಮಾನಿಸಿ ಕರೆತರಲಾಗುತ್ತದೆ.

ಇಷ್ಟಾದರೂ ಕೇಂದ್ರ ಬಿಜೆಪಿ ಸರ್ಕಾರ, ಪ್ರಧಾನಿ ಮೌನ ವಹಿಸಿರೋದು ಖಂಡನೀಯವಾಗಿದೆ. ಅಮೆರಿಕಾದ ಈ ನಡೆಯನ್ನ ಭಾರತ ತೀವ್ರವಾಗಿ ಖಂಡಿಸಬೇಕು. ಗೌರವಯುತವಾಗಿ ಭಾರತೀಯರನ್ನ ಸ್ವದೇಶಕ್ಕೆ ಕರೆತರುವ ಕೆಲಸ ಮಾಡಬೇಕು ಎಂದು ಆಗ್ರಹಿಸಿತು. ಈ ಪ್ರತಿಭಟನೆಯಲ್ಲಿ ಹಲವು ಕಾಂಗ್ರೆಸ್‌ ನಾಯಕರು, ಮುಖಂಡರು, ಕಾರ್ಯಕರ್ತರು ಭಾಗಿಯಾಗಿದರು.