ಕಲಬುರಗಿ: ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಿ ಮೋದಿ ಬಡವರ ಖಾತೆಗೆ 5ಸಾವಿರ ರೂ. ಹಣ ಹಾಕುವುದಾಗಿ ವಾಟ್ಸಾಪ್‌ನಲ್ಲಿ ಸುಳ್ಳು ವದಂತಿ ಹಬ್ಬಿದೆ. ಈ ಹಿನ್ನಲೆ ಕಲಬುರಗಿ ಅಂಚೆ ಕಚೇರಿ ಎದುರು ಖಾತೆ ತೆರೆಯಲು ಜನರು ದುಂಬಾಲು ಬಿದ್ದಿದ್ದಾರೆ.
ಕರ್ನಾಟಕದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಣ ಹಾಕುತ್ತಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಜೆಪಿ ಗೆಲುವು ಸಾಧಿಸಿದ ಹಿನ್ನೆಲೆ ಪ್ರಧಾನಿ ಮೋದಿ 5 ಸಾವಿರ ರೂ. ಹಣ ಹಾಕುತ್ತಾರೆ. ಇದಕ್ಕಾಗಿ ಡಿಜಿಟಲ್ ಅಕೌಂಟ್ ಹೊಂದಿರಬೇಕು ಎಂದು ಸುಳ್ಳು ಸಂದೇಶ ವಾಟ್ಸಪ್‌ನಲ್ಲಿ ಹರಿದಾಡಿದೆ.
ಈ ಹಿನ್ನೆಲೆ ಕಲಬುರಗಿ ಅಂಚೆ ಕಚೇರಿ ಎದುರು ಡಿಜಿಟಲ್ ಅಕೌಂಟ್‌ಗಾಗಿ ಬೆಳಿಗ್ಗೆಯಿಂದ ಮಹಿಳೆಯರು ಸೇರಿದಂತೆ ನೂರಾರು ಜನ ಕ್ಯೂ ನಲ್ಲಿ ನಿಂತಿದ್ರು.