ಚಿಕ್ಕೋಡಿ : ಚಿಕ್ಕೋಡಿ ಉಪವಿಭಾಗದ ಅಥಣಿಯಲ್ಲಿ ಮಳೆ ಅವಾಂತರಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ನಿನ್ನೆ ಸುರಿದ ಧಾರಾಕಾರ ಮಳೆಗೆ ಹಳ್ಳಿಗಳು ತುಂಬಿ ಹರಿದಿವೆ. ಇಂದು ಬೆಳಗ್ಗಿನ ಜಾವ ದೇವರ ದರ್ಶನಕ್ಕೆ ಹೋಗುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ಸಾವನ್ನಪ್ಪಿದ್ಧಾರೆ.

ಈ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಮಸೂಬಾ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ವ್ಯಕ್ತಿ ಸಾವನ್ನಪ್ಪಿದ್ದು, ಗುರುರಾಜ್ ಈರಪ್ಪ ಯಾದವಾಡ (75) ಮೃತ ದುರ್ದೈವಿಯಾಗಿದ್ದಾರೆ. ಮೃತ ದುರ್ದೈವಿ ಅಥಣಿ ಪಟ್ಟಣದ ಜೇರೆ ಗಲ್ಲಿ ನಿವಾಸಿಯಾಗಿದ್ದಾರೆ. ಈ ಘಟನೆ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿಂದೆ.