ಬೆಳಗಾವಿ: ಕೆಲ ಕಿಡಿಗೇಡಿಗಳು ಗ್ರಾಮ ಪಂಚಾಯಿತಿಗೆ ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಬೆಳಗಾವಿ ತಾಲ್ಲೂಕಿನ ಕಲಕಾಂಬಾ ಗ್ರಾಮದಲ್ಲಿ ನಡೆದಿದೆ.
ಪಂಚಾಯತಿಯಲ್ಲಿದ್ದ ಎರಡು ಸಿಸಿಟಿವಿ ಕ್ಯಾಮರಾ ಕನೆಕ್ಷನ್ ಕಟ್ ಮಾಡಿ, ಬೀಯರ್ ಬಾಟಲ್ ನಲ್ಲಿ ಪೆಟ್ರೋಲ್ ತುಂಬಿ ಪಂಚಾಯತಿ ಮೇಲೆ ಎಸೆದಿದ್ದಾರೆ. ಇದರಿಂದ ಪಂಚಾಯತಿ ಕಿಟಕಿ ಗಾಜು ಪುಡಿಪುಡಿಯಾಗಿ, ಕಚೇರಿ ಒಳಗೆ ಕೆಲವು ಕಡೆ ಹಾನಿ ಉಂಟಾಗಿದೆ.
ಪಂಚಾಯತಿ ಕಚೇರಿಯಲ್ಲಿ ಇದ್ದ ದಾಖಲೆಗಳನ್ನ ಸುಟ್ಟು ಹಾಕೋ ಉದ್ದೇಶದಿಂದ ಕೃತ್ಯವೆಸಗಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಸ್ಥಳಕ್ಕೆ ಪಿಡಿಒ, ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.