ವೈರಲ್

ಈ ದೇಗುಲದಲ್ಲಿ ಆಂಜನೇಯನ ಅಡಿಯಲ್ಲಿ ಪಿಸ್ತೂಲ್ ಇಡೋದು ಯಾಕೆ.?

ಆಂಜನೇಯನ ಸೊಂಟದಲ್ಲಿ ಪಿಸ್ತೂಲ್ ರಾರಾಜಿಸುತ್ತಿದೆ. ಜಾಗನೂರ ಹಾಗೂ ಸುತ್ತಲಿನ ಗ್ರಾಮಗಳಿಗೆ 'ಜಾಗೃತ ದೇವಸ್ಥಾನ' ಎಂದೇ ಇದು ಹೆಸರುವಾಸಿಯಾಗಿದೆ. ದೀಪಾವಳಿ ಪ್ರಯುಕ್ತ ನ.1, 2ರಂದು ವೈಭವದಿಂದ ನೆರವೇರಲಿರುವ ಹನುಮಾನ ದೇವರ ಜಾತ್ರೆಗೆ ಜಾಗನೂರ ಗ್ರಾಮ ಸಜ್ಜಾಗಿದೆ.

ಚಿಕ್ಕೋಡಿ : ಸಾಮಾನ್ಯವಾಗಿ ನಮಗೆ ದೇವರ ಆಯುಧಗಳು ಎಂದರೆ ನೆನಪಾಗೋದು, ಬಿಲ್ಲು, ಖಡ್ಗ, ತ್ರಿಶೂಲ, ಶಂಖ, ನೋಡಿರುತ್ತೀರಿ. ಆದರೆ ಇಲ್ಲಿ ಆಂಜನೇಯ ತನ್ನ ಸೊಂಟಕ್ಕೆ ಪಿಸ್ತೂಲ್ ಇಟ್ಟುಕೊಂಡಿರುವುದು ನೀವೇನಾದರೂ ನೋಡಿದ್ದೀರಾ.

ಹೌದು, ಹನುಮಾನ ದೇವರ ಮೂರ್ತಿ ಅಲಂಕರಿಸುವಾಗ, ಜಾತ್ರೆ, ಉತ್ಸವ, ಹನುಮ ಜಯಂತಿ, ರಾಮನವಮಿ ಸೇರಿ ವಿಶೇಷ ಸಂದರ್ಭ ಪಿಸ್ತೂಲ್ ಇರಿಸುವ ಪರಿಪಾಠ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ದೀಪಾವಳಿ ಪ್ರಯುಕ್ತ ನ.1, 2ರಂದು ವೈಭವದಿಂದ ನೆರವೇರಲಿರುವ ಹನುಮಾನ ದೇವರ ಜಾತ್ರೆಗೆ ಜಾಗನೂರ ಗ್ರಾಮ ಸಜ್ಜಾಗಿದೆ. ಆಂಜನೇಯನ ಸೊಂಟದಲ್ಲಿ ಪಿಸ್ತೂಲ್ ರಾರಾಜಿಸುತ್ತಿದೆ. ಜಾಗನೂರ ಹಾಗೂ ಸುತ್ತಲಿನ ಗ್ರಾಮಗಳಿಗೆ 'ಜಾಗೃತ ದೇವಸ್ಥಾನ' ಎಂದೇ ಇದು ಹೆಸರುವಾಸಿಯಾಗಿದೆ.

ಬಹುತೇಕ ಕಡೆ ಆಂಜನೇಯ ದೇವರಿಗೆ ಭಂಡಾರ ತೂರುವುದಿಲ್ಲ. ಆದರೆ, ಜಾಗನೂರಿನ ಹನುಮಾನ ದೇವರಿಗೆ ಭಂಡಾರ ಹಾರಿಸಲಾಗುತ್ತದೆ. ಅದೂ ದೀಪಾವಳಿಯ ಅಮವಾಸ್ಯೆಯಂದು ಮಾತ್ರ. ಇನ್ನೂಳಿದ ದಿನಗಳಲ್ಲಿ ಜಾಗನೂರಿನ ಆಂಜನೇಯನಿಗೆ ಭಂಡಾರ ನಿಷಿದ್ದ. ಈ ಹನುಮಾನ ದೇವರ ದೇವಸ್ಥಾನದ ನೋಟಹನುಮಂತ ಪೂಜಾರಿ ಗ್ರಾಮಸ್ಥಜಾಗನೂರಿನ ಆಂಜನೇಯನ ದರ್ಶನಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ವರ್ಷವಿಡೀ ಆಗಮಿಸುತ್ತಾರೆ.