ಟೊರೊಂಟೊ: 80 ಜನರಿದ್ದ ಡೆಲ್ಟಾ ಏರ್ ಲೈನ್ಸ್ ಜೆಟ್ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಟೊರೊಂಟೊದ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹಿಮಭರಿತ ನೆಲದ ಮೇಲೆ ವಿಮಾನ ಮಗುಚಿ ಬಿದ್ದಿರುವುದಾಗಿ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.
76 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತ ಎಂಡೀವರ್ ಏರ್ ಫ್ಲೈಟ್ 4819 ಮಧ್ಯಾಹ್ನ ಅಮೆರಿಕದ ಮಿನ್ನೇಸೋಟ ರಾಜ್ಯದ ಮಿನ್ನಿಯಾಪೋಲಿಸ್‌ನಿಂದ ಹಾರಿ ಕೆನಡಾದ ಅತಿದೊಡ್ಡ ಮಹಾನಗರದಲ್ಲಿ ಇಳಿಯುತ್ತಿತ್ತು. ಈ ವೇಳೆ ವಿಮಾನದ ರೆಕ್ಕೆಗಳು ಅಪಘಾತಕ್ಕೀಡಾಗಿ ವಿಮಾನ ಪಲ್ಟಿಯಾಗಿದೆ.