ಹಾಸನ : ಕಲಿಪುರಷ ಅಲ್ರಡಿ ಈಗ ಹುಟ್ಟಿದ್ದಾನೆ, ರಾಮ ಮತ್ತು ಲಕ್ಷ್ಮಣ ಈಗಾಗಲೇ ಬೇರೆ ಆವತಾರದಲ್ಲಿ ಹುಟ್ಟಿದ್ದಾರೆ. ಕಲಿಯುಗದ ಅಂತ್ಯಕಾಲ ಅದ್ರೆ 2025- 26 ಈ ರಾಷ್ಟ್ರದಲ್ಲಿ ಯುದ್ದ ಆಗಲಿದೆ. ಕಲಿಪುರಷನಿಗೆ ಈಗ 17 ವರ್ಷ ಆಗಿದೆ. ಆದ್ರೆ ಪ್ರಧಾನ ಮಂತ್ರಿ ಕೇವಲ ಒಂದುವರೇ ವರ್ಷ ಮಾತ್ರ ಇರುತ್ತಾರೆ ನಂತರ ರಾಜೀನಾಮೆ ಕೊಡುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಎಂದು ಭವಿಷ್ಯ ನುಡಿದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಕರ್ನಾಟಕ ಮೂರು ಭಾಗವಾಗಲಿದೆ. ತಿರುಪತಿ ಬೆಟ್ಟ ಕುಸಿಯಲಿದೆ ಕರ್ನಾಟಕದ ಮುಳುಬಾಗಿಲವರೆಗೆ ಸಮುದ್ರದ ನೀರು ಬರಲಿದೆ. ನಮ್ಮ ದೇಶದ ಮೇಲೆ 25 ಮುಸ್ಲೀಂ ದೇಶಗಳು ಒಮ್ಮೇಲೆ ಯುದ್ದ ಮಾಡುತ್ತವೆ. ಅದ್ರೆ ನಮಗೆ ರಷ್ಯ ಮಾತ್ರ ಸಹಾಯ ಮಾಡುತ್ತದೆ. ಅಣುಬಾಂಬ್ ಹಾಕಲಿದ್ದಾರೆ ಆದ್ರೆ ಕಲಿಪುರಷನ ಸಹಾಯದಿಂದ ಅಣುಬಾಂಬ್ ಸಿಡಿಯುವುದಿಲ್ಲ, ಅವರವರ ಜಗಳದಲ್ಲಿ ಮನುಷ್ಯ ಬಡವನಾಗುತ್ತಾನೆ. ನಮ್ಮ ದೇಶ ಎರಡು ದೇಶ ಆಗಲಿದೆ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.