ಮೈಸೂರು : ಹೆಚ್.ಡಿ ಕೋಟೆಯ ಶಾಂತಿಪುರ, ಬೋಚಿಕಟ್ಟೆ ಮತ್ತು ಚಾಕಹಳ್ಳಿ ಗ್ರಾಮಗಳ ಸುತ್ತಮುತ್ತ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಈ ಗ್ರಾಮಗಳಲ್ಲಿ ಎರಡು ಮರಿಗಳೊಂದಿಗೆ ತಾಯಿ ಹುಲಿ ಸಂಚಾರದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಭಯಭೀತರಾಗಿದ್ದಾರೆ. ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಯು ಈ ಗ್ರಾಮಗಳ ಸುತ್ತಮುತ್ತ ಬೀಡುಬಿಟ್ಟಿದ್ದಾರೆ. RFO ಪೂಜಾ, DRFO ಸ್ನೇಹ ಹಾಗೂ ಪರಮೇಶ್ ಸೇರಿದಂತೆ 25ಕ್ಕೂ ಹೆಚ್ಚು ನುರಿತ ತಜ್ಞರಿಂದ ಕರ್ಯಾಚರನೆ ನಡೆಯುತ್ತಿದ್ದು, ಹುಲಿ ಹೆಜ್ಜೆ ಗುರುತು, ಜಾಡು ಹಿಡಿದು ಸೆರೆ ಹಿಡಿಯಲು ಯತ್ನಿಸುತ್ತಿದ್ದಾರೆ.
ಇನ್ನು ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ಚುರುಕುಗೊಂಡಿದ್ದು, ಚಾಲಾಕಿ ಹುಲಿ ಬಲೆಗೆ ಬೀಳದೆ ತಪ್ಪಿಸಿ ಕೊಳ್ಳತ್ತಿದೆ. ನಾಗರಹೊಳೆ, ಬಂಡೀಪುರದ ಅಭಯಾರಣ್ಯಕ್ಕೆ ಹೆಚ್.ಡಿ ಕೋಟೆ ಹೊಂದಿಕೊಂಡಿದ್ದು, ಒಂದೆಡೆ ಆನೆಗಳ ಉಪಟಳ ಮತ್ತೊಂದೆಡೆ ಹುಲಿ ಚಿರತೆ ಭೀತಿ ಎದುರಾಗಿದೆ. ಆದ್ರೆ ಆದಷ್ಟು ಬೇಗ ಹುಲಿ ಸೆರೆ ಹಿಡಿಯಲು ಸ್ಥಳೀಯರು ಆಗ್ರಹಿಸಿದ್ದಾರೆ.