ಕರ್ನಾಟಕ

ಬರೋಬ್ಬರಿ 27 ವರ್ಷಗಳ ಬಳಿಕ ಕೊಲೆ ಆರೋಪಿಯನ್ನ ಬಂಧಿಸಿದ ಪೊಲೀಸರು

ಪೊಲೀಸರು ಕೊಲೆ ಆರೋಪಿಯನ್ನ ಬಂಧಿಸಿದ್ದಾರೆ. ನಿಂಗಪ್ಪ (75) ಕೊಲೆ ಮಾಡಿ 27 ವರ್ಷಗಳ ಬಳಿಕ ಜೈಲುಪಾಲಾಗಿದ್ದಾನೆ.

ತುಮಕೂರು : ತುಮಕೂರಿನಲ್ಲಿ ಬರೋಬ್ಬರಿ 27 ವರ್ಷದ ಬಳಿಕ ಕೊಲೆ ಆರೋಪಿಯನ್ನ ಬಂಧಿಸಲಾಗಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕುಡುವನಘಟ್ಟ ಗ್ರಾಮದಲ್ಲಿ 1997 ಮೇ 7 ರಂದು ಕೊಲೆ ನಡೆದಿತ್ತು. ಕುಡುವನಘಟ್ಟ ಗ್ರಾಮದ ನಿಂಗಪ್ಪ ತನ್ನ ಹೆಂಡತಿ ಗೌರಮ್ಮಳಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

ಕೆಲ ದಿನಗಳ ಹಿಂದೆ ಆರೋಪಿ ನಿಂಗಪ್ಪ ಕುಡುವನಘಟ್ಟ ಗ್ರಾಮಕ್ಕೆ ವಾಪಸ್ ಆಗಿದ್ದ. ಈ ಬಗ್ಗೆ ಸುಳಿವು ಸಿಕ್ಕ ‌ಹಿನ್ನೆಲೆ, ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ನಿಂಗಪ್ಪ (75) ಕೊಲೆ ಮಾಡಿ 27 ವರ್ಷಗಳ ಬಳಿಕ ಜೈಲುಪಾಲಾಗಿದ್ದಾನೆ.