ಕರ್ನಾಟಕ

ಅಥಣಿಯಲ್ಲಿ ಮಕ್ಕಳ ಕಿಡ್ನಾಪ್ ಕೇಸ್..ಆರೋಪಿಗಳ ಮೇಲೆ ಖಾಕಿ ಫೈರಿಂಗ್..!

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಹೊರ ವಲಯದಲ್ಲಿ, ಆತ್ಮರಕ್ಷಣೆಗಾಗಿ ಕಿಡ್ನಾಪರ್ಸ್​ ಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಹಾಡಹಗಲೇ ಇಬ್ಬರು ಮಕ್ಕಳು ಕಿಡ್ನಾಪ್ ಪ್ರಕರಣದ ಆರೋಪಿಗಳ ಮೇಲೆ, ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಹೊರ ವಲಯದಲ್ಲಿ,  ಆತ್ಮರಕ್ಷಣೆಗಾಗಿ ಕಿಡ್ನಾಪರ್ಸ್ ಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. 

ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಅಪಹರಣ ಮಾಡಿದ್ದ ಆರೋಪಿಗಳ ಕಿಡಿಗೇಡಿತನ, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ 3 ವಿಶೇಷ ತಂಡಗಳನ್ನು ರಚಿಸಿದ್ದ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ, ಕಿಡ್ನಾಪರ್ಸ್ ಕೋಹಳ್ಳಿ ಸಿಂಧೂರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುವಾಗ ತಡೆದಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ರು. ಆತ್ಮರಕ್ಷಣೆಗಾಗಿ ಕಿಡ್ನಾಪರ್ಸ್ ಕಾಲಿಗೆ ಪಿ.ಎಸ್.ಐ ಉಪ್ಪಾರ ಫೈರಿಂಗ್ ನಡೆಸಿದ್ದಾರೆ. ಫೈರಿಂಗ್ ಮಾಡಿ ಮಕ್ಕಳನ್ನು ರಕ್ಷಿಸಿದ ಪೊಲೀಸರು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.