ವೈರಲ್

ನ್ಯೂ ಇಯರ್‌ ಗೆ ದಿನಗಣನೆ..ಖಾಕಿ ಅಲರ್ಟ್..!

ಹೊಸ ವರ್ಷ ಸಮೀಪಿಸುತ್ತಿರೋ ಹಿನ್ನೆಲೆ,‌ ಗಾಂಜಾ ಪೆಡ್ಲರ್‌ ಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು, ನಗರದ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೇನು 2024ನೇ ವರ್ಷ ಮುಗಿಯೋ ಹಂತಕ್ಕೆ ಬಂತು. ಇನ್ನೊಂದು ತಿಂಗಳು ಕಳೆದ್ರೆ 2025ನೇ ವರ್ಷಕ್ಕೆ ಕಾಲಿಡಲಿದ್ದೇವೆ. ಹೊಸ ವರ್ಷ ಸಮೀಪಿಸುತ್ತಿರೋ ಹಿನ್ನೆಲೆ, ಬೆಂಗಳೂರು ಪೊಲೀಸರು ಫುಲ್‌  ಅಲರ್ಟ್‌ ಆಗಿದ್ದಾರೆ. ಗಾಂಜಾ ಪೆಡ್ಲರ್‌ ಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು, ನಗರದ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. 

ನಿನ್ನೆ ರಾತ್ರಿ ಬೆಂಗಳೂರು ನಗರ ಫೊಲೀಸರು, ಗಾಂಜಾ ಪೆಡ್ಲರ್ ಗಳ ಮನೆ ಮೇಲೆ ಕೂಡ ದಾಳಿ ಮಾಡಿ ಪರಿಶೀಲಿಸಿದ್ದಾರೆ.ಹೊಸ ವರ್ಷಕ್ಕೆ ಹೊರ ರಾಜ್ಯ ಮತ್ತು ದೇಶಗಳಿಂದ ಡ್ರಗ್ಸ್, ಗಾಂಜಾ, ಮಾನವ ಕಳ್ಳ ಸಾಗಣಿಕೆ ಸಾಧ್ಯತೆ ಹಿನ್ನೆಲೆ, ಲಾಡ್ಜ್‌ಗಳ ಮೇಲೆ ಕೂಡ ದಾಳಿ ನಡೆಸಿದ್ದಾರೆ.