ಕರ್ನಾಟಕ

ನಾಗಮಂಗಲ ಪಟ್ಟಣದಲ್ಲಿ ಕೋಟೆ ಗಣೇಶೋತ್ಸವ ..ಖಾಕಿ ಸರ್ಪಗಾವಲು..!

ನಾಗಮಂಗಲ ಪಟ್ಟಣದಲ್ಲಿ ಕೋಟೆ ಗಣೇಶೋತ್ಸವ ಹಿನ್ನೆಲೆ, ಪೊಲೀಸರು ಹೈ ಅಲರ್ಟ್​ ಆಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ.

ಇಂದು ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಕೋಟೆ ಗಣೇಶೋತ್ಸವ ಹಿನ್ನೆಲೆ, ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ಲಿಕ್ಕರ್ ನ್ಯಾನ್ ಮಾಡಲಾಗಿದೆ.

ಅಲ್ಲದೇ ನಾಗಮಂಗಲ ಪಟ್ಟದಲ್ಲಿ ನಡೆಯಬೇಕಿದ್ದ ಶುಕ್ರವಾರದ ಸಂತೆಗೂ ನಿರ್ಬಂಧ ಹೇರಲಾಗಿದೆ. ಇಂದು ನಾಗಮಂಗಲಕ್ಕೆ ಎಂಟ್ರಿಯಾಗೋ ವಾಹನಗಳ ಮಾರ್ಗವನ್ನು ಮಧ್ಯಾಹ್ನ 12 ಗಂಟೆಯಿಂದ 6 ಗಂಟೆಯವರೆಗೂ ಬದಲು ಮಾಡಲಾಗಿದೆ. 

ಮೈಸೂರು ಕಡೆಯಿಂದ ನಾಗಮಂಗಲಕ್ಕೆ ಬರುವ ವಾಹನಗಳು ಕೆ.ಮಲ್ಲೇನಹಳ್ಳಿ ಬಳಿ ಡೈವರ್ಷನ್ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಕೆ. ಮಲ್ಲೇನಹಳ್ಳಿ, ಬಂಕಾಪುರ ಮಾರ್ಗವಾಗಿ ಬೆಳ್ಳೂರಿಗೆ, ಬೆಳ್ಳೂರು ಕಡೆಯಿಂದ ಬರುವ ವಾಹನಗಳು ನಾಗಮಂಗಲದ ಐಬಿ ವೃತ್ತದ ಮೂಲಕ ಶಿವನಳ್ಳಿ ಗೇಟ್, ಬಂಕಾಪುರ, ಕೆ.ಮಲ್ಲೇನಹಳ್ಳಿ ಮಾರ್ಗವಾಗಿ ತೆರಳಲು ಮಾರ್ಗ ಬದಲು ಮಾಡಲಾಆಗಿದೆ.