ಕರ್ನಾಟಕ

ಬೈಕ್‌ ಕಳ್ಳರ ವಿರುದ್ಧ ಪೊಲೀಸರ ಭರ್ಜರಿ ಕಾರ್ಯಾಚರಣೆ

ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬೈಕ್‌ ಕಳ್ಳರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಬೈಕ್‌ ಕಳ್ಳರನ್ನ ಬಂಧಿಸಿ, 21 ಬೈಕ್‌ಗಳನ್ನ ವಶಕ್ಕೆ ಪಡೆದಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಬೈಕ್‌ ಕಳ್ಳರ ಸಂಖ್ಯೆ ಏನೋ ಜಾಸ್ತಿನೇ ಇದೆ. ಆದ್ರೆ ಇಂದು ಪಣತೊಟ್ಟು ಅಖಾಡಕ್ಕಿಳಿದ ಪೊಲೀಸರು ಬೈಕ್‌ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಬೆಂಗಳೂರು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬೈಕ್‌ ಕಳ್ಳರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಬೈಕ್‌ ಕಳ್ಳರನ್ನ ಬಂಧಿಸಿ,  21 ಬೈಕ್‌ಗಳನ್ನ ವಶಕ್ಕೆ ಪಡೆದಿದ್ದಾರೆ.

ಬೈಕ್‌ ಗಳನ್ನ ಕದ್ದು ಪರಾರಿಯಾಗ್ತಿದ್ದ ಆರೋಪಿ ಪ್ರಭು , ಗೋವಿಂದರಾಜುನನ್ನ ಮಹಾಲಕ್ಷೀ ಲೇಜೌಟ್‌ ಪೊಲೀಸರು  ಬಂಧಿಸಿದ್ದಾರೆ. ಬಂಧಿತರಿಂದ  6.5 ಲಕ್ಷ ರೂ ಮೌಲ್ಯದ 21 ಬೈಕ್‌ಗಳನ್ನ ವಶಕ್ಕೆ ಪಡಿಸಿಕೊಂಡಿದ್ದಾರೆ. ಇನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರಿಂದ ತನಿಖೆ ಮುಂದುವರಿದಿದೆ.