ವೈರಲ್

ಪೊಲೀಸ್​ ಸ್ಟೆಷನ್​ಗಳೆ ಕಾಂಗ್ರೆಸ್​ ಕಛೇರಿಗಳು..! ಆರ್​. ಅಶೋಕ್​ ಹೀಗಂದಿದ್ದೆಕೆ?

ಪೊಲೀಸ್​ ಸ್ಟೆಷನ್​ಗಳು ಕಾಂಗ್ರೆಸ್ ಕಚೇರಿಗಳಾಗಿ ಮತ್ತು ಆ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೆಲ ಕೋಮುವಾದಿ ಮುಸ್ಲಿಮರಿಗೆ ಹಬ್ಬವಿದ್ದಂತೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ಹಾಸನ: ಕರ್ನಾಟಕದಲ್ಲಿ ಪೊಲೀಸ್ ಸ್ಟೇಷನ್‌ಗಳು ಸ್ಟೇಷನ್‌ಗಳಾಗಿ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಕಚೇರಿಗಳಾಗಿ ಮತ್ತು ಆ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೆಲ ಕೋಮುವಾದಿ ಮುಸ್ಲಿಮರಿಗೆ ಹಬ್ಬವಿದ್ದಂತೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ. 

ಮಾಧ್ಯಮದೊಂದಿಗೆ ಮಾತನಾಡಿ ಅವರು, ನನ್ನ ಮೇಲೆ, ಶೋಭಾ ಕರಂದ್ಲಾಜೆ ಹಾಗೂ ಯತ್ನಾಳ್ ಅವರ ಮೇಲೆ ಕೇಸ್ ಹಾಕಿದ್ದಾರೆ. ತನಿಖೆ ಮಾಡಿ ಅಂತ ಹೇಳುವ ಹಕ್ಕು ವಿರೋಧ ಪಕ್ಷದ ನಾಯಕನಿಗೆ ಇಲ್ಲವೇ?. ಸುಮೋಟೋ ಕೇಸ್ ದಾಖಲಿಸಿದ್ದಾರೆ. ಕಾನ್ಸ್‌ಟೇಬಲ್ ಕಂಪ್ಲೆಂಟ್ ಕೊಡುತ್ತಾನೆ, ಇನ್ಸ್‌ಪೆಕ್ಟರ್ ಕೇಸ್ ಹಾಕುತ್ತಾನೆ. ಈಗ ಪೊಲೀಸ್ ಸ್ಟೇಷನ್‌ಗಳು ಸ್ಟೇಷನ್‌ಗಳಾಗಿ ಉಳಿದಿಲ್ಲ. ಪೊಲೀಸ್ ಸ್ಟೇಷನ್‌ಗಳು ಕಾಂಗ್ರೆಸ್ ಕಚೇರಿಗಳಾಗಿ ಕೆಲಸ ಮಾಡುತ್ತಿವೆ ಎಂದು ಟೀಕಿಸಿದರು.