ಕರ್ನಾಟಕ

ತುಮಕೂರಿನಲ್ಲಿ ಮುಂದುವರೆದ ಖಾಕಿ V/S ವಕೀಲರ ಜಟಾಪಟಿ..!

ನಗರ ಠಾಣೆ ಸಿಪಿಐ ದಿನೇಶ್ ಕುಮಾರ್ ದೂರು ನೀಡಿರುವ ಹಿನ್ನೆಲೆ ವಕೀಲ ರವಿಕುಮಾರ್, ಆತನ‌ ತಂದೆ ಚಂದ್ರಶೇಖರ್ ಮತ್ತೋರ್ವನ ಮೇಲೆ ಪ್ರಕರಣ ದಾಖಲಾಗಿದೆ.

ತುಮಕೂರಿನಲ್ಲಿ ನಡೆದ ಪೊಲೀಸರು ಮತ್ತು ವಕೀಲರ ನಡುವಿನ ಜಟಾಪಟಿ ಪ್ರಕರಣ ಸಂಬಂಧ, ಪರಸ್ಪರ ಎರಡೂ ಕಡೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ನಗರ ಠಾಣೆ ಸಿಪಿಐ  ದಿನೇಶ್ ಕುಮಾರ್ ದೂರು ನೀಡಿರುವ ಹಿನ್ನೆಲೆ ವಕೀಲ ರವಿಕುಮಾರ್, ಆತನ‌ ತಂದೆ ಚಂದ್ರಶೇಖರ್ ಮತ್ತೋರ್ವನ ಮೇಲೆ ಪ್ರಕರಣ ದಾಖಲಾಗಿದೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಆತ್ಮಹತ್ಯೆ ಬೆದರಿಕೆ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ ದಾಖಲಾಗಿದೆ. ವಕೀಲ ರವಿ ಕುಮಾರ್ ನೀಡಿದ ದೂರಿನ ಮೇರೆಗೆ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್, ರೈಲ್ವೇ ಅಧಿಕಾರಿಗಳಾದ ವೀರೇಶ್,ಪ್ರಸನ್ನಕುಮಾರ್, ಕುಶಾಲ್ ವಿರುದ್ದ ಪ್ರಕರಣ ದಾಖಲಾಗಿದ್ದಾರೆ. ಪೊಲೀಸರು ರೈಲ್ವೇ ಅಧಿಕಾರಿಗಳ ಕುಮ್ಮಕ್ಕಿನಿಂದ ಹಲ್ಲೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಎರಡು ಪ್ರತ್ಯೇಕ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.