ತುಮಕೂರು : ಕಳ್ಳನನ್ನ ಹಿಡಿಯಲು ಹೋಗಿದ್ದ ಪೊಲೀಸರು ಪ್ರಾಣಕ್ಕೆ ಕುತ್ತು ತಂದು ಕೊಂಡಿಂದ್ದಾರೆ. ಕಳ್ಳನನ್ನ ಟ್ರೇಸ್ ಮಾಡುವಾಗ ಪೊಲೀಸರ ಕಾರು ಅಪಘಾತಕ್ಕಿಡಾಗಿದ್ದು, ಮಧುಗಿರಿ ಠಾಣೆಯ ಮೂವರು ಪೊಲೀಸರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಆಂದ್ರಪ್ರದೇಶದ ಮಣೂರು ಬಳಿ ನಡೆದಿದೆ.

ಮಧುಗಿರಿ ಪೊಲೀಸ್ ಠಾಣೆಯ ಕ್ರೈಂ ಸಿಬ್ಬಂದಿ ಪ್ರಕಾಶ್, ಮುದ್ದರಾಜು ಹಾಗೂ ರಮೇಶ್ ಗೆ ಗಂಭೀರವಾಗಿ ಗಾಯಗೊಂಡ ಪೊಲೀಸರಾಗಿದ್ದಾರೆ. ನಿನ್ನೆ ಮಧುಗಿರಿ ಪಟ್ಟಣದಲ್ಲಿ ಖದೀಮ ಮಹಿಳೆಯ ಬಳಿ 70 ಗ್ರಾಂ ಚಿನ್ನದ ಸರ ಕದ್ದು ಎಸ್ಕೇಪ್ ಆಗಿದ್ದರು. ಈ ಪ್ರಕರಣ ಸಂಬಂಧ ಮಹಿಳೆ ಮಧುಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಇದೇ ವೇಳೆ ಮಧುಗಿರಿ ಪೊಲೀಸರು ಕಳ್ಳನ ಜಾಡು ಹಿಡಿದು ಹೊರಟಿದ್ದರು. ಕಳ್ಳರನ್ನ ಹಿಡಿಯುವ ಬರದಲ್ಲಿ ವೇಗವಾಗಿ ತೆರಳುತ್ತಿದ್ದ ವೇಳೆ ಕಾರು ಅಪಘಾತವಾಗಿದೆ. ಕಾರಿನ ಸ್ಟೇರಿಂಗ್ ಲಾಕ್ ಆಗಿ ಪಲ್ಟಿ ಹೊಡೆದಿದ್ದು, ಕಣ್ಣು, ತಲೆ, ಕೈ, ಕಾಲುಗಳಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸದ್ಯ, ಗಾಯಗೊಂಡ ಪೊಲೀಸ್ ಸಿಬ್ಬಂದಿಗಳಿಗೆ ಆಂಧ್ರದ ಧರ್ಮವರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದೃಷ್ಟವಶಾತ್ ಪೊಲೀಸ್ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಆಂಧ್ರಪ್ರದೇಶದ ಧರ್ಮವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.