ತುಮಕೂರು - ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎನ್.ರಾಜಣ್ಣ ಸುರೇಶ್ ಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೆಲಸ ಹೇಳಿದಾಗ ಮಾಡಿಲ್ಲ ಎಂಬ ಕಾರಣಕ್ಕೆ ಸುಖಾ ಸುಮ್ಮೆನ ಆರೋಪಗಳು ಮಾಡಲಾಗಿದೆ. ಸದ್ಯ ತುಮಕೂರು ಕೊರಟಗೆರೆ ಕ್ಷೇತ್ರವನ್ನ ಪ್ರತಿನಿಧಿಸುತ್ತಿರುವ ಡಾ. ಜಿ.ಪರಮೇಶ್ವರ್ ವಿರುದ್ಧ ಬಳಸುತ್ತಿರುವ ಪದಕ್ಕೆ ಸುರೇಶ್ ಗೌಡ ಕ್ಷಮೆ ಯಾಚಿಸಬೇಕೆಂದು ರಾಜಣ್ಣ ಆಗ್ರಹಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಟಿ ಮಾಡಿ ಮಾತನಾಡಿದ ರಾಜಣ್ಣ , ತುಮಕೂರು ಗ್ರಾಮಾಂತರದ ಹಾಲಿ - ಮಾಜಿಗಳು ಆರೋಪ ಪ್ರತ್ಯರೋಪ ಮಾಡುತ್ತಾ ಇದ್ದಾರೆ. ಇಬ್ಬರಿಗೂ ಹೇಳೋದು ವೈಯಕ್ತಿಕವಾಗಿ ಮಾಡೋದು ಗೌರವ ತರುವುದಿಲ್ಲ. ಇನ್ನೂ , ಸುರೇಶ್ ಗೌಡ್ರು ತಾಳ್ಮೆ ಇಟ್ಟುಕೊಳ್ಳಬೇಕು. ಗೌರಿಶಂಕರ್ ಕೂಡಾ ಪದ ಬಳಕೆಯಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ಪದ ಬಳಸಬೇಕು. ಇಬ್ಬರು ಏಕವಚದಲ್ಲಿ ಮಾತನಾಡುವ ಕೆಲಸ ಮಾಡಬಾರದು.ಸುರೇಶ್ ಗೌಡ ಮೂರು ಬಾರಿ ಶಾಸಕರಾಗಿರುವ ಅನುಭವ ಇದೆ. ಇನ್ನೂ ಡಾ.ಜಿ.ಪರಮೇಶ್ವರ್ ಅವರು ಗೃಹಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರಿಗೆ ತೇಜೋವಧೆ ಮಾಡುವ ಮಾತನಾಡೋದು ಖಂಡನೀಯ.ಪರಮೇಶ್ವರ್ ಬಗ್ಗೆ ಆಡಿರೋ ಮಾತು ವಾಪಾಸ್ ಪಡೆಯಬೇಕು ಹಾಗೂ ಕ್ಷೇತ್ರದ ಜನರ ಕ್ಷಮೆ ಕೇಳಬೇಕು. ಇನ್ನೂ ತುಮಕೂರು ಗ್ರಾಮಾಂತರಕ್ಕೆ ತನ್ನದೇ ಆದ ಘನತೆ ಗೌರವ ಇದೆ. ಇವರು ಕೂಡಾ ಪ್ರತಿನಿಧಿಸಿ ಗೆದ್ದಿದ್ದಾರೆ . ಗ್ರಾಮಾಂತರ ಪಕ್ಷ ಜಾತಿ ಆಧಾರದಲ್ಲಿ ಗಲಭೆಯಾಗಿಲ್ಲ.
ಸುಸಂಸ್ಕೃತ ಕ್ಚೇತ್ರದಿಂದ ಬಂದಿದ್ದು ಅವರಿಗೆ ಗೌರವ ಸಲ್ಲಿಸಬೇಕು. ಆಗಾಗಿ ಅವರು ಕ್ಷೇತ್ರದ ಜನತೆಗೆ ಕ್ಷಮೆ ಕೇಳಬೇಕು.ತುಮಕೂರು ಎಕ್ಸ್‌ಪ್ರೆಸ್ ಕೆನಾಲ್ ಬರುವುದಕ್ಕೆ ಪರಮೇಶ್ವರ್ ವಿರುದ್ಧ ಇತ್ತು. ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಒಪ್ಪಿಗೆಯಾಗಿ , ಪರಮೇಶ್ವರ್ ಸುಮ್ಮನೆ ಇದ್ರು , ಕಾಲನಂತರದಲ್ಲಿ ಯಡಿಯೂರಪ್ಪ ಸರ್ಕಾರ ಈ ಯೋಜನೆಗೆ ಬ್ರೇಕ್ ಹಾಕಿತು. ಇನ್ನೂ ನಾವೆಲ್ಲಾ ಪರಮೇಶ್ವರ್ ಹಾದಿಯಾಗಿ ಲಿಂಕ್ ಕೆನಾಲ್ ಗೆ ವಿರೋಧ ಇದೆ. ಹೀಗಿರುವಾಗ ಸುರೇಶ್ ಗೌಡ ಮಹಾಜಗದ್ಗುರು ನಾ ? ಸುರೇಶ್ ಗೌಡ ಪಾರ್ಟಿಯಲ್ಲೇ ಹೆಗ್ಗಣ ಸತ್ತು ಬಿದ್ದಿದೆ. ನಾನು ವಿಜಯೇಂದ್ರ ಜಾಗದಲ್ಲಿ ಇದ್ದಿದ್ರೆ ಯತ್ನಾಳ್ ಕಿತ್ತು ಬಿಸಾಕುತ್ತಿದೆ. ಯತ್ನಾಳ್ ಸೀನಿಯರ್ ಲೀಡರ್ ಇದ್ದರೂ ಅಂತಹವರ ಬಾಯಲ್ಲಿ ಇಂತಹ ಆರೋಪ ಬಂದ್ರು ಕೇಳೋರಿಲ್ಲ.
ಅವರು ಪಕ್ಷದಲ್ಲಿ ಶಿಸ್ತು ಇದ್ಯಾ ? ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು ಆದ್ರೆ ಗುಂಪುಗಾರಿಕೆ ಇಲ್ಲ ಎಂದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರವೂ ಚರ್ಚೆಯಾಯಿತು. ಮೆ.೧೮ ರಂದು 2023 ರಲ್ಲಿ ಪ್ರೇಸ್ ನೋಟ್ ರಿಲೀಸ್ ಮಾಡಿದ್ದಾರೆ. ರೀಲೀಸ್ ಮಾಡಿರೋದ್ರಲ್ಲಿ ಏನಿದೆ ಅವರ ಗಮನಕ್ಕೆ ತಂದಿದ್ದೇನೆ. ಈ ಲೋಕಸಭೆನಾ ಅಥವಾ ಇನ್ನೋಂದ ಅಂತಾ ಕೇಳಿ ಬಂದಿದ್ದೇನೆ. ಲೋಕಸಭೆ ಮುಗಿದು ಒಂದು ವರ್ಷ ಆಯ್ತು ಕೇಳಿದ್ದೀನಿ. ನಾನು ಒನ್ ಮ್ಯಾನ್ ಒನ್ ಪೋಸ್ಟ್ ಅಂತಿನೀ. ನನ್ನ ಅಧ್ಯಕ್ಷ ಮಾಡಿದ್ರೆ ಮಿಸಿಸ್ಟರ್ ಗಿರಿ ಬಿಡ್ತೀನಿ. ನನ್ನ ಮನವಿಗೆ ಎಲ್ಲವನ್ನ ಸ್ವೀಕರಿಸಿದ್ದಾರೆ. ಜಾತಿಗಣತಿ ವಿಚಾರ ಸಂಬಂಧ ಮಾತನಾಡಿ , ಜಾತಿಗಣತಿ ಸಮಗ್ರವಾದ ವಿಚಾರ ಯಾರಿಗೂ ಗೊತ್ತಿಲ್ಲ. ಅದು ಟ್ರಜರಿಯಲ್ಲಿ ಇಟ್ಟಿದೆ ಯಾರಿಗೂ ಸಿಕ್ಕಿಲ್ಲ. ಮುಂದಿನ ತಿಂಗಳು ಕ್ಯಾಬಿನೆಟ್ ನಲ್ಲಿ ಮಂಡಿಸಿ ಮುಂದಿನ ನಿರ್ಧಾರ ತಗೋಳ್ತೀವಿ. ನಮ್ಮ ಸರ್ಕಾರ ನಮ್ಮ ಪಕ್ಷ ಒಳಮೀಸಲಾತಿಗೆ ಬದ್ದವಾಗಿದ್ದೇವೆ. ಅದನ್ನ ಮಾಡೋವಾಗ ಯಾರಿಗೂ ತೊಂದರೆಯಾಗದರೀತಿಯಲ್ಲಿ ಮಾಡ್ತೀವಿ. ನಾಗಮೋಹನ್ ದಾಸ್ ವರದಿ ಬಳಿಕ ಮಾಡ್ತೀವಿ ಎಂದರು .
ಈ ವೇಳೆ ಸುಳ್ಳಿಗೆ ಮತ್ತೊಂದು ಹೆಸ್ರು ಅದುವೇ ದೇವೇಗೌಡ ಎಂದು ರಾಜಣ್ಣ ಕಿಡಿಕಾರಿದರು. 2018 ರಲ್ಲಿ ದೇವೇಗೌಡ್ರು ಕುಮಾರಸ್ವಾಮಿ ಮಾಡಬೇಡಿ ಎಂದಿದ್ದರು. ಬಿಜೆಪಿ ಪಾರ್ಟಿ ಸ್ವಂತ ಯಡಿಯೂರಪ್ಪ - ಜೆಡಿಎಸ್ ದೇವೇಗೌಡ ಅಂಡ್ ಕಂಪನಿ ಹಾಗೂ ಕಾಂಗ್ರೆಸ್ ಲೀ ಸಿದ್ದರಾಮಯ್ಯ ಅಂಡ್ ಕಂಪನಿ ಎನ್ನುತ್ತಾರೆ. ನಮ್ಮ ಶಕ್ತಿ ಏನು ಅನ್ನೋದನ್ನ ಗಮನದಲ್ಲಿಟ್ಟು ತೀರ್ಮಾನ ಮಾಡಬೇಕು.ಸಿದ್ದರಾಮಯ್ಯ ಇಲ್ಲದೇ ಕಾಂಗ್ರೆಸ್ ಇಲ್ಲ ಅಂತಾ ನಾನು ಹೇಳಲಿ ಅಂತಾ ನೀವು ಬಯಸುತ್ತಾ ಇದ್ದೀರಾ ? ಎಲ್ಲರಿಗೂ ಪಕ್ಷ ಇದ್ರೆ ಅಧಿಕಾರ ಸಿಗುತ್ತೆ. ಪಕ್ಷ ಇಲ್ಲ ಅಂದ್ರೆ ಅಧಿಕಾರ ಸಿಗುತ್ತಾ ?
ದೇವರಾಜು ಅರಸು ದಾಖಲೆ ಸಿದ್ದರಾಮಯ್ಯ ಮುರಿಯುವ ವಿಚಾರ ಬಹಳಷ್ಟು ಜನ ಏಮಾಏಮಿಗಳು ಸಿಎಂ ಸ್ಥಾನ ಕೇಳುತ್ತಾರೆ. ದೇವರಾಜು ಅರಸು ಪರವಾಗಿ ಹೆಚ್ಚಿನ ಜನ ಅಭಿಪ್ರಾಯ ಹೇಳುತ್ತಾರೆ. ಇಂದಿರಾಗಾಂಧಿಗೆ ಮಾತನಾಡಿದಾಗ ಅವರಿಗೆ ಹೇಳುತ್ತಾರೆ. ಶಾಸಕರ ಅಭಿಪ್ರಾಯ ಕಡೆಗಣಿಸುವ ಕೆಲಸ ಯಾರು ಮಾಡೊಕೆ ಆಗೋಲ್ಲ ಎಂದರು.