ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತದ ಕಳಪೆ ಆಟ ಮುಂದುವರೆದಿದೆ. ಸಿಡ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಜಸ್ಟ್ 185 ರನ್‌ಗಳಿಗೆ ಸರ್ವಪತನ ಕಂಡಿದೆ. ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ ಜಸ್ಪ್ರಿತ್ ಬುಮ್ರಾ ಟಾಸ್ ಗೆಲ್ಲುತ್ತಿದ್ದಂತೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ನಾಯಕನ ನಿರ್ಧಾರವನ್ನು ಬ್ಯಾಟರ್‌ಗಳು ತಪ್ಪು ಎಂದು ಸಾಬೀತು ಮಾಡಿದರು. ಆರಂಭದಿಂದಲೇ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಇನ್ನಿಂಗ್ಸ್ ಆರಂಭಿಸಿದ ಕೆ.ಎಲ್. ರಾಹುಲ್ ಕೇವಲ 4 ರನ್ಗಳಿಗೆ ಸುಸ್ತಾದರು. ಯಶಸ್ವಿ ಜೈಸ್ವಾಲ್ 10 ರನ್‌ಗೆ ಸುಸ್ತಾಗಿದ್ದಾರೆ. ಹೀಗಾಗಿ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಪರ ರಿಷಬ್ ಪಂತ್ ಗರಿಷ್ಠ 40 ರನ್ ಗಳಿಸಿದರೆ, ರವೀಂದ್ರ ಜಡೇಜಾ 26 ರನ್, ಕ್ಯಾಪ್ಟನ್ ಬುಮ್ರಾ 22 ರನ್, ಶುಭ್ಮನ್ ಗಿಲ್ 20 ರನ್, ವಿರಾಟ್ ಕೊಹ್ಲಿ 17 ರನ್, ಯಶಸ್ವಿ ಜೈಸ್ವಾಲ್ 10 ರನ್ಗಳ ಗಳಿಸಲು ಪರದಾಡಿದ್ದಾರೆ.. ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲ್ಯಾಂಡ್ 4 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ 3 ವಿಕೆಟ್,.ಪ್ಯಾಟ್ ಕಮಿನ್ಸ್ 2 ವಿಕೆಟ್, ನಾಥನ್ ಲಿಯಾನ್ 1 ವಿಕೆಟ್ ಪಡೆದು ಮಿಂಚಿದ್ದಾರೆ.