ಕರ್ನಾಟಕ

ವಿವಿ ಹಾಸ್ಟೆಲ್‌ನಲ್ಲಿಯೇ ಸ್ನಾತಕೋತ್ತರ ವಿದ್ಯಾರ್ಥಿನಿ ಸೂಸೈಡ್‌

ಹಾಸ್ಟೆಲ್‌ನಲ್ಲಿ ಇಂದು ಮಧ್ಯಾಹ್ನ ನೇಣು ಬಿಗಿದುಕೊಂಡಿದ್ದು, ಜೀವ ಕಳೆದುಕೊಂಡಿದ್ದಾಳೆ.. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಅಡಿ ಪ್ರಕರಣ ದಾಖಲಾಗಿದೆ..

ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.. ಮೃತ ವಿದ್ಯಾರ್ಥಿನಿ 22 ವರ್ಷದ ಪಾವನಾ ಹೆಚ್.ಎನ್  ಎಂದು ಗುರುತಿಸಲಾಗಿದೆ.. ಜ್ಞಾನಭಾರತಿ ಕ್ಯಾಂಪಸ್‌ನ ಕನ್ನಡ ಅಧ್ಯಯನ ಕೇಂದ್ರದಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.. ಹಾಸ್ಟೆಲ್‌ನಲ್ಲಿ ಇಂದು ಮಧ್ಯಾಹ್ನ ನೇಣು ಬಿಗಿದುಕೊಂಡಿದ್ದು, ಜೀವ ಕಳೆದುಕೊಂಡಿದ್ದಾಳೆ.. ಮೂಲತಃ ಎಚ್.ಡಿ ಕೋಟೆಯ ಹೆಬ್ಬಲಗುಪ್ಪೆ ಹಳ್ಳಿಯವರು ಎಂದು ತಿಳಿದು ಬಂದಿದೆ.. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಅಡಿ ಪ್ರಕರಣ ದಾಖಲಾಗಿದೆ..