ಕರ್ನಾಟಕ

ನಿರ್ಬಂಧಿತ ತುಂಗಭದ್ರಾ ಡ್ಯಾಂ ಮೇಲೆ ಪ್ರೀ-ವೆಡ್ಡಿಂಗ್ ಫೋಟೋಶೂಟ್..ಸಾರ್ವಜನಿಕರು ಕಿಡಿ

ತುಂಗಭದ್ರಾ ಡ್ಯಾಂ ಮೇಲೆ ಕಾರಿನ ಮೇಲೆ ನಿಂತು ಪೋಸ್ ಕೊಡುತ್ತಿರುವ ಜೋಡಿ ಮೇಲೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ನಿರ್ಬಂಧಿತ ಡ್ಯಾಂ ನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಗೆ ಅವಕಾಶ ಕೊಟ್ಟಿದ್ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ತುಂಗಭದ್ರಾ ಜಲಾಶಯ ಮಳೆಯಿಂದ ಭರ್ತಿಯಾಗಿ ತುಂಬಿ ಹರಿಯುತ್ತಿದೆ. ಅಪಾಯದ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ, ಜಲಾಶಯದ ಬಳಿ ನಿರ್ಬಂಧ ಹೇರಲಾಗಿದೆ. ಅಲ್ಲದೇ ಭದ್ರತಾ ದೃಷ್ಟಿಯಿಂದ ಜಲಾಶಯದ ಮೇಲೆ ಯಾವುದೇ ಶೂಟಿಂಗ್ ನಡೆಯುವಂತಿಲ್ಲ ಎಂದು, ನಿಷೇಧಿಸಲಾಗಿದೆ. ಹೀಗಿದ್ದರೂ ಜೋಡಿಯೊಂದು ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿರೋದು, ಸಾರ್ವಜನಿಕರ ಆಕ್ರೋಶಕ್ಕೀಡಾಗಿದೆ.

KA-01 MY 2174 ಬೆಂಗಳೂರು ಪಾಸಿಂಗ್ ಕಾರೊಂದನ್ನು ಜಲಾಶಯದ ಮೇಲ್ಭಾಗದಲ್ಲಿ, ಕಾರು ತೆಗೆದುಕೊಂಡು ಹೋಗಿ ಕಾರಿನ ಮೇಲೆ ಪೋಸ್ ಕೊಡುತ್ತಾ ತೆಗೆಸಿಕೊಂಡಿರುವ ಫೋಟೋ ವೈರಲ್ ಆಗಿದೆ. ನಿಷೇಧವಿದ್ದರೂ ಪ್ರೀ-ವೆಡ್ಡಿಂಗ್ ಶೂಟ್ ಹೇಗೆ ಮಾಡಿಸೋಕೆ ಆಗುತ್ತೆ. ಪ್ರೀ ವೆಡ್ಡಿಂಗ್ ಫೋಟೋಶೂಟ್ ಗೆ ಅಧಿಕಾರಿಗಳು ಅನುಮತಿ ನೀಡಿದ್ರಾ ಎಂದು ಸಾರ್ವಜನಿಕರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.