ಸ್ಪೆಷಲ್ ಸ್ಟೋರಿ

ಮತ್ತೆ ನಗರದಲ್ಲಿ ಜಾಹೀರಾತುಗಳ ಪ್ರದರ್ಶನಕ್ಕೆ ತಯಾರಿ?

ಸಾಕಷ್ಟು ಕಸರತ್ತುಗಳ ಬಳಿಕ ರದ್ದಾಗಿದ ಜಾಹೀರಾತು ಪ್ರದರ್ಶನ ಮತ್ತೆ ತಲೆ ಎತ್ತಲು ಸರ್ಕಾರ ಪೂರ್ಣ ತಯಾರಿ ಶುರು ಮಾಡಿಕೊಂಡಿದೆ.

ಬೆಂಗಳೂರು - ಉದ್ಯಾನನಗರಿ ಬೆಂಗಳೂರಿನಲ್ಲಿ ಜಾಹೀರಾತುಗಳ ಹಾವಳಿ ಈ ಹಿಂದೆ ದೊಡ್ಡ ಸಂಚಲನ ಸೃಷ್ಟಿಸಿತು. ಸದ್ಯ ನಗರದ ಮುಖ್ಯ ಭಾಗಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅಗತ್ಯವಾದ ಕ್ರಮಗಳ ಕುರಿತು ಸರ್ಕಾರ ಪೂರ್ಣ ತಯಾರಿ ಸಿದ್ದಪಡಿಸಿದೆ. 

ಬಿಬಿಎಂಪಿ ಜಾಹೀರಾತು ಉಪವಿಧಿ 2024 ರ ಪ್ರಕಾರ ನಿಗದಿತ ಸ್ಥಳಗಳಲ್ಲಿ ಹೊರಾಂಗಣದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಮತ್ತೆ ಅವಕಾಶ ಕಲ್ಪಿಸಲು ಸಿದ್ದತೆ ನಡೆದಿದೆ. 

ನಗರದ ಅಂದ ಹಾಳಾಗುತ್ತದೆ , ಜೊತೆಗೆ ವಾಹನಗಳ ಸಂಚಾರದ ವೇಳೆ ವಾಹನ ಸವಾರರಿಗೂ ದೊಡ್ಡ ಡೈವರ್ಟ್ ಮೈಂಡ್ ಆಗುವ ಸಾಧ್ಯತೆ ಲೆಕ್ಕ ಹಾಕಿ ಈ ಬೋರ್ಡ್ಗಳ ಪ್ರದರ್ಶನಕ್ಕೆ ಮಾಜಿ ಕೆಎಎಸ್ ಆಧಿಕಾರಿ ಕೆ.ಮಥಾಯಿ ನೇತೃತ್ವದಲ್ಲಿ ವರದಿ ನೀಡಿ ರದ್ದು ಮಾಡಲಾಗಿತು. ಈಗ ಸರ್ಕಾರ ಮತ್ತೆ ನಿಗದಿತ ಸ್ಥಳಗಳನ್ನ ಹೊರತು ಪಡಿಸಿ ಉಳಿದ ಕಡೆಯೆಲ್ಲ 100 ಮೀಟರ್ ಅಂತರದಲ್ಲಿ ಜಾಹೀರಾತುಗಳ ಪ್ರದರ್ಶನಕ್ಕೆ ಯೋಚಿಸುತ್ತಿದೆ. ಇದನ್ನ ಪ್ರಶ್ನಿಸಿ ಸದ್ಯ ಹೈಕೋರ್ಟ್ನಲ್ಲಿ ವಿಚಾರಣೆ ಇದ್ದು, ಈ ಸಂಬಂಧ ಕೆಲವೊಂದು ದಾಖಲೆಗಳನ್ನ ಸಲ್ಲಿಕೆ ಮಾಡಿ ಪಾಲಿಕೆ ಜಾಹೀರಾತು ಪ್ರದರ್ಶನ ಮಾಡಬೇಕಾಗಿದೆ.