ಸೋಮವಾರ ಪ್ಯಾರಿಸ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಕೃತಕ ಬುದ್ಧಿಮತ್ತೆ (AI) ಶೃಂಗಸಭೆಗೆ ಮುಂಚಿತವಾಗಿ ಎಲಿಸೀ ಅರಮನೆಯಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸಿದ್ದ ಸ್ವಾಗತ ಔತಣಕೂಟದಲ್ಲಿ ಭಾಗವಹಿಸಿದರು. ಇನ್ನೂ ಪ್ರ್ಯಾನ್ಸ್‌ಗೆ ಆಗಮಿಸಿದ ಸ್ನೇಹಿತ ಪ್ರಧಾನಿ ಮೋದಿಯನ್ನ ಮ್ಯಾಕ್ರನ್ ಅವರು ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದ್ದಾರೆ.
"ಪ್ಯಾರಿಸ್‌ಗೆ ಸ್ವಾಗತ, ನನ್ನ ಸ್ನೇಹಿತ @narendramodi," ಎಂದು ಮ್ಯಾಕ್ರನ್ ಅವರು ಎಲಿಸೀ ಅರಮನೆಗೆ ಸ್ವಾಗತ ಭೋಜನಕ್ಕೆ ಪ್ರಧಾನಿ ಆಗಮಿಸಿದ ವೀಡಿಯೊವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
PM @narendramodi interacts with President @EmmanuelMacron and USA @VP @JDVance in Paris. pic.twitter.com/FFBLCRvRoM
ಇನ್ನೂ ಪ್ರಧಾನಿ ಮೋದಿ ಪ್ಯಾರಿಸ್‌ಗೆ ಬಂದಿಳಿಯುತ್ತಿದ್ದಂತೆ , ಅವರಿಗೆ ಭಾರತೀಯ ಸಮುದಾಯದಿಂದ ಭವ್ಯ ಸ್ವಾಗತ ದೊರೆತಿದೆ. ಈ ಬಗ್ಗೆ ನರೇಂದ್ರ ಮೋದಿ ಸಹ ಟ್ವೀಟ್ ಮಾಡಿದ್ದು, ಪ್ಯಾರಿಸ್‌ನಲ್ಲಿ ನನಗೆ ಅವಿಸ್ಮರಣೀಯ ಸ್ವಾಗತ ದೊರಕಿದೆ. ಶೀತ ಹವಾಮಾನದ ಸಂಜೆಯನ್ನೂ ಲೆಕ್ಕಿಸದೇ ಭಾರತೀಯ ಸಮುದಾಯವು ನನಗೆ ಅಪಾರ ಪ್ರೀತಿಯ ಸ್ವಾಗತವನ್ನ ನೀಡಿದ್ದಾರೆ. ನಮ್ಮ ವಲಸಿಗರಿಗೆ ಕೃತಜ್ಞತೆಗಳು ಮತ್ತು ಅವರ ಸಾಧನೆಗಳಿಗಾಗಿ ಅವರ ಬಗ್ಗೆ ಹೆಮ್ಮೆಯಿದೆ" ಎಂದು ಬರೆದುಕೊಂಡಿದ್ದಾರೆ.
A memorable welcome in Paris!
The cold weather didn’t deter the Indian community from showing their affection this evening. Grateful to our diaspora and proud of them for their accomplishments! pic.twitter.com/rrNuHRzYmU