ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿನ ಬಹುನಿರೀಕ್ಷಿತ ಪ್ರಾಜೆಕ್ಟ್ ಝಡ್ -ಮೋರ್ಹ್ ಟನಲ್ ಲೋಕಾರ್ಪಣೆಯಾಗಿದೆ.. ಶ್ರೀನಗರ ಮತ್ತು ಲಡಾಖ್ ನಡುವೆ ಋತುಮಾನದಲ್ಲೂ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಯೋಜನೆಯನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.. ₹2,680 ಕೋಟಿ ವೆಚ್ಚದಲ್ಲಿ ಈ ಸುರಂಗ ಮಾರ್ಗ ನಿರ್ಮಾಣವಾಗ್ತಿದೆ.. ಶ್ರೀನಗರದಿಂದ ಲಡಾಖ್ ನಡುವೆ ಎಲ್ಲಾ ಋತುಮಾನದಲ್ಲಿ ಸಂಪರ್ಕ ಕಲ್ಪಿಸಲಿದೆ.. ಚಳಿಗಾಲದಲ್ಲಿ ಭಾರಿ ಹಿಮಪಾತದಿಂದಾಗಿ ಸೋನ್ಮಾರ್ಗ್ ಜನರಿಗೆ ರಸ್ತೆ ಸಂಪರ್ಕ ಇಲ್ಲದಂತಾಗುತ್ತದೆ.. ಹೀಗಾಗಿ ಜನರಿಗೆ ಕಣಿವೆಯ ಇತರ ಜನರೊಂದಿಗೆ ಸಂಪರ್ಕ ಸಾಧಿಸುವುದು ದುಸ್ತರವಾಗುತ್ತದೆ.. ಈ ನಿಟ್ಟಿನಲ್ಲಿ ಈ ಸುರಂಗ ಮಾರ್ಗ ಪ್ರಮುಖವಾಗಿದೆ.. ಸದ್ಯ 6.4 ಕಿ.ಮೀ ಉದ್ದದ ಸೋನ್ಮಾರ್ಗ್ ದಾರಿಯ ಸುರಂಗ ಮಾರ್ಗ ನಿರ್ಮಾಣವಾಗಿದೆ.. ಎರಡು ರಸ್ತೆ ಮಾರ್ಗದಲ್ಲಿ ವಾಹನಗಳು ಸಂಚರಿಸಬಹುದು..