ಕರ್ನಾಟಕ

ಸುರ್ಜೇವಾಲ ಕೈಸೇರಿದ ಸಿದ್ದರಾಮಯ್ಯ ಆಡಳಿತದ ರಿಪೋರ್ಟ್‌

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾಗೆ 20 ತಿಂಗಳ ಆಡಳಿತದ ವರದಿಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾಗೆ 20 ತಿಂಗಳ ಆಡಳಿತದ ವರದಿಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.. ಕಾಂಗ್ರೆಸ್‌ ಸರ್ಕಾರದ ಆಡಳಿತ,  ಅಭಿವೃದ್ಧಿ ಯೋಜನೆ, ಸಚಿವರ ಕಾರ್ಯವೈಖರಿ ಬಗ್ಗೆ ವರದಿ ಸಲ್ಲಿಕೆ ಮಾಡಲಾಗಿದೆ.. ಮತ್ತೊಂದೆಡೆ ಈಗಾಗಲೇ ಸಚಿವರು ತಮ್ಮ ಇಲಾಖೆ ವರದಿಯನ್ನ ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಸಲ್ಲಿಸಿದ್ದಾರೆ.. ಈ ರಿಪೋರ್ಟ್‌ ಕೂಡ ಇಂದಿನ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾಗೆ ಸಲ್ಲಿಸಲಾಗುತ್ತೆ.. ಅಲ್ಲದೇ ಇಂದಿನ ಮಹತ್ವದ ಮೀಟಿಂಗ್‌ನಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಡಿನ್ನರ್‌ ಪಾಲಿಟಿಕ್ಸ್‌, ಅಧಿಕಾರ ಹಂಚಿಕೆಯ ಬಹಿರಂಗ ಹೇಳಿಕೆಗಳು, ಸಿಎಂ, ಡಿಸಿಎಂ ಬಣಗಳ ಹೇಳಿಕೆ-ಪ್ರತಿಹೇಳಿಕೆಗಳಿಗೆ ಕಡಿವಾಣ ಹಾಕುವ ಸಂಬಂಧವೂ ಚರ್ಚೆ ನಡೆಯಲಿದೆ ಎನ್ನಲಾಗ್ತಿದೆ.. ಅಲ್ಲದೇ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಬೆಳಗಾವಿಯಲ್ಲಿ ಜ.21ರಂದು ನಡೆಯಲಿರುವ ಗಾಂಧಿ ಭಾರತ ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.