ಕರ್ನಾಟಕ
ಕಲ್ಲು ಎಸೆಯೋರು, ಬೆಂಕಿ ಹಚ್ಚುವ ಮುಸ್ಲಿಂ ಹುಡುಗರ ರೆಡಿ ಮಾಡ್ತಿದ್ದಾರೆ; ಭಾಸ್ಕರ್ ರಾವ್
ಕಲ್ಲು ಎಸೆಯೋರು, ಬೆಂಕಿ ಹಚ್ಚುವ ಮುಸ್ಲಿಂ ಹುಡುಗರನ್ನ ರೆಡಿ ಮಾಡ್ತಾ ಇದ್ದಾರೆ, ಇದು ಕ್ರಿಯೆಟ್ ಮಾಡ್ತಾ ಇರೋದು ಸಚಿವ ಜಮೀರ್ ಅಹ್ಮದ್ ಎಂದು ಬಿಜೆಪಿ ನಾಯಕ ಭಾಸ್ಕರ್‌ರಾವ್ ಆರೋಪಿಸಿದ್ದಾರೆ..
ಕಲ್ಲು ಎಸೆಯೋರು, ಬೆಂಕಿ ಹಚ್ಚುವ ಮುಸ್ಲಿಂ ಹುಡುಗರನ್ನ ರೆಡಿ ಮಾಡ್ತಾ ಇದ್ದಾರೆ, ಇದು ಕ್ರಿಯೆಟ್ ಮಾಡ್ತಾ ಇರೋದು ಸಚಿವ ಜಮೀರ್ ಅಹ್ಮದ್ ಎಂದು ಬಿಜೆಪಿ ನಾಯಕ ಭಾಸ್ಕರ್‌ರಾವ್ ಆರೋಪಿಸಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಭಾಸ್ಕರ್‌ರಾವ್, ಜಮೀರ್ ಅಹ್ಮದ್ ಬಾಲ ಬಿಚ್ಚೋಕೆ ಕಾರಣ ಸಿದ್ದರಾಮಯ್ಯ, ಹಸುಗಳ ಕೆಚ್ಚಲು ಕೊಯ್ಯುವ ಕೆಲಸ ಬಸವನಗುಡಿ, ಜಯನಗರದಲ್ಲಿ ಮಾಡೋಕೆ ಆಗುತ್ತಾ? ಇದೆಲ್ಲಾ ಚಾಮರಾಜಪೇಟೆಯಲ್ಲಿ ಮಾತ್ರ ಸಾಧ್ಯ ಎಂದು ಕಿಡಿಕಾರಿದ್ದಾರೆ.. ನಾನು ಯಾವುದೇ ಸಮುದಾಯದ ಬಗ್ಗೆ ಮಾತನಾಡ್ತಿಲ್ಲ.. ಆ ಸಮುದಾಯದ ಲೀಡರ್ ಬಗ್ಗೆ ಮಾತಾಡ್ತಾ ಇದ್ದೇನೆ, ಹಸುಗಳ ಕೆಚ್ಚಲು ಕೊಯ್ದ ಕೇಸಲ್ಲಿ ಈಗ ಬಂಧನ ಆದವನು ಬಿಹಾರಿ, ಅವನು ಹುಚ್ಚ, ಅವನಿಗೂ ಇದಕ್ಕೂ ಸಂಬಂಧ ಇಲ್ಲ.. ಅಮಾಯಕನ ಕರ್ಕೊಂಡು ಬಂದಿದ್ದಾರೆ ಅಂತಾ ಭಾಸ್ಕರ್ ರಾವ್ ಆರೋಪಿಸಿದ್ದಾರೆ..ದೇಶದಲ್ಲಿ ಎಲ್ಲಿಯೂ ಆಗದಿರುವ ಘಟನೆ ನಿನ್ನೆ ಆಗಿದೆ.. ಇದೊಂದು ಷಡ್ಯಂತ್ರ, ಚಾಮರಾಜಪೇಟೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಹಿಂದೂಗಳನ್ನ ಓಡಿಸಲು ಷಡ್ಯಂತ್ರ ನಡೆದಿದೆ, ಸಚಿವ ಜಮೀರ್ ಮೂರು ಹಸು ಕೊಡಿಸುತ್ತೇನೆ ಅಂದಿದ್ದಾರೆ..ಅವರಿಗೆ ಭಾವನೆಯೇ ಇಲ್ಲ, ಅದೇನು ಆಟದ ವಸ್ತುವಾ..? ಎಂದು ಪ್ರಶ್ನಿಸಿದ್ದಾರೆ..