ರಾಮೇಶ್ವರಂ ಕೆಫೆ ರೀತಿಯಲ್ಲಿಯೇ ಬಾಂಬ್ ಬ್ಲಾಸ್ ಮಾಡುವುದಾಗಿ ಅಪರಿಚಿತನಿಂದ ಬೆದರಿಕೆ ಕರೆ ಬಂದಿದೆ.. ಜನವರಿ 9ರಂದು ಸಂಜೆ ಬೆಂಗಳೂರಿನ ಪೊಲೀಸ್ ಆಯುಕ್ತರ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದ ಆಗಂತುಕ, 6 ಜನ ಬೆಂಗಳೂರಿನ ಆರು ಕಡೆ ಬಾಂಬ್ ಬ್ಲಾಸ್ಟ್ ಮಾಡ್ತಾರೆ ಅಂತಾ ಬೆದರಿಕೆ ಹಾಕಿದ್ದಾನೆ.. ಅಷ್ಟೇ ಅಲ್ಲದೇ ಗಣರಾಜ್ಯೋತ್ಸವದಂದೂ ನಗರದ ಗಣ್ಯರ ಮನೆಯನ್ನ ರಾಮೇಶ್ವರಂ ಕೆಫೆ ರೀತಿಯಲ್ಲೇ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಹುಸಿ ಬಾಂಬ್ ಕರೆ ಮಾಡಿದ್ದಾನೆ.. ಈ ಸಂಬಂಧ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.. ಅಪರಿಚಿತ ವ್ಯಕ್ತಿ ನೀಡಿದ ಮಾಹಿತಿ ಮೇಲೆಯೇ 6 ಜನರ ಹೆಸರು, ವಿಳಾಸವನ್ನು ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ.. ಬೆಂಗಳೂರಿನ ವಿಧಾನಸೌಧ ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಬಾಂಬ್ ಬೆದರಿಕೆ ಹಾಕಿರುವ ವ್ಯಕ್ತಿಗಾಗಿ ತಲಾಶ್ ನಡೆಯುತ್ತಿದೆ..