ವಿದೇಶ
ಕಾಡ್ಗಿಚ್ಚಿಗೆ ಲಾಸ್ ಏಂಜಲೀಸ್‌ನಲ್ಲಿ 24 ಮಂದಿ ಬಲಿ..!
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚಿನ ರುದ್ರನರ್ತನ ಮುಂದುವರೆದಿದೆ.. ವೇಗವಾಗಿ ಹಬ್ಬುತ್ತಿರುವ ಕಾಡ್ಗಿಚ್ಚಿಗೆ ಈವರೆಗೂ 24 ಮಂದಿ ಸುಟ್ಟು ಕರಕಲಾಗಿದ್ದಾರೆ..
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚಿನ ರುದ್ರನರ್ತನ ಮುಂದುವರೆದಿದೆ.. ವೇಗವಾಗಿ ಹಬ್ಬುತ್ತಿರುವ ಕಾಡ್ಗಿಚ್ಚಿಗೆ ಈವರೆಗೂ 24 ಮಂದಿ ಸುಟ್ಟು ಕರಕಲಾಗಿದ್ದಾರೆ.. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.. ಈಟನ್ ವ್ಯಾಪ್ತಿಯಲ್ಲಿ 16 ಮೃತದೇಹ, ಪಾಲಿಸೇಡ್ಸ್ ಪ್ರದೇಶದಲ್ಲಿ 8 ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.. ಕಳೆದ 1 ವಾರದಿಂದ ಕಾಡ್ಗಿಚ್ಚಿನ ಹೊಡೆತಕ್ಕೆ ಲಕ್ಷಾಂತರ ಜನರ ಬದುಕು ಬುಡಮೇಲಾಗಿದೆ.. ಲಾಸ್ ಏಂಜಲಿಸ್ ನಗರದಿಂದ ಈಗಾಗಲೇ 1 ಲಕ್ಷಕ್ಕೂ ಅಧಿಕ ಜನರನ್ನ ಸ್ಥಳಾಂತರಿಸಲಾಗಿದೆ.. ಬೆಂಕಿ ನಂದಿಸಲು ಅಗ್ನಿಶಾಮಕದಳದವರು ಹರಸಾಹಸ ಪಡುತ್ತಿದ್ದಾರೆ.. ಸಾವಿರಾರು ಎಕರೆ ಪ್ರದೇಶ ಈಗಾಗಲೇ ಕಾಡ್ಗಿಚ್ಚಿಗೆ ಆಹುತಿಯಾಗಿದೆ.. ಬೆಂಕಿ ಕೆನ್ನಾಲಿಗೆಯಿಂದ ಜೀವ ಉಳಿದರೆ ಸಾಕು ಎಂದು ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ.. ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ ಸೇರಿದಂತೆ ಹಲವು ನಗರಗಳಲ್ಲಿ ಈಗಾಗಲೇ ಬಿಸಿಗಾಳಿ 70 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ ಎಂದು ವರದಿಯಾಗಿದೆ.. ಈಗಾಗಲೇ ಲಾಸ್ ಏಂಜಲಿಸ್‌ನಲ್ಲಿ ಭೀಕರ ಕಾಡ್ಗಿಚ್ಚಿಗೆ ಕನಿಷ್ಠ 24 ಜನರು ಮೃತಪಟ್ಟಿದ್ದು, ಸಾವಿರಾರು ಮನೆಗಳು ನಾಶವಾಗಿದೆ ಎಂದು ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ಹೇಳಿದ್ದಾರೆ..