ಕಲಬುರಗಿ: ನಗರದ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಗಳು ಕಲಬುರಗಿ ಜೈಲಿನ ವ್ಯವಸ್ಥೆ ಸರಿಯಿಲ್ಲ ಎಂದು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಇನ್ನು ಈ ವಿಚಾರಕ್ಕೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ್, ಏನ್ ವ್ಯವಸ್ಥೆ ಸರಿಯಿಲ್ಲ, ಏನು ಸಮಸ್ಯೆ ಇದೆ ಅಂತ ಡಿಜಿಪಿ ಜೊತೆ ಚರ್ಚೆ ಮಾಡ್ತೇನೆ. ಏಕೆ ಪ್ರತಿಭಟನೆ ಮಾಡ್ತಾಯಿದ್ದಾರೆ ಅಂತ ಕೇಳ್ತಿನಿ. ಈಗಾಗಲೇ ನಾವು ಇಡೀ ಜೈಲ್ ಬಗ್ಗೆ ರಿವ್ಯೂ ಮಾಡ್ಸಿದ್ದೀನಿ ಎಂದರು.