ಮುಂಬೈ: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮುಂಬೈನ ಯುವ ಆಟಗಾರ ಪೃಥ್ವಿ ಶಾ ರನ್ನು ಯಾವ ತಂಡವೂ ಖರೀದಿಸಲಿಲ್ಲ. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪೃಥ್ವಿ ಶಾ ರನ್ನು ಟ್ರೋಲ್ ಮಾಡಲಾಗ್ತಿದ್ದು, ಈ ಬಗ್ಗೆ ಯುವ ಕ್ರಿಕೆಟಿಗ ಬೇಸರ ವ್ಯಕ್ತಪಡಿಸಿದಾರೆ.
ಟ್ರೋಲ್ ಬಗ್ಗೆ ಮಾತನಾಡಿರುವ ಪೃಥ್ವಿ ಶಾ “ಕೆಲವರು ನನ್ನನ್ನು ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಎಲ್ಲವನ್ನು ನಾನು ಗಮನಿಸುತ್ತಿದ್ದೇನೆ. ನಾನೇನು ತಪ್ಪು ಮಾಡಿದ್ದೇನೆ. ಟ್ರೋಲ್ ಮಾಡುವಾಗ ಅದರಿಂದ ಮನಸ್ಸಿಗೆ ಆಗುವ ನೋವು ಟ್ರೋಲ್ಗೆ ಒಳಗಾದ ವ್ಯಕ್ತಿಗೆ ಮಾತ್ರ ತಿಳಿಯುತ್ತದೆ. ಅತಿಯಾದ ಟ್ರೋಲ್ ಒಬ್ಬ ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸುವಂತೆ ಮಾಡುತ್ತದೆ. ಇದು ನಿಜಕ್ಕೂ ಅಕ್ಷಮ್ಯ” ಎಂದು ತಿಳಿಸಿದಾರೆ.
ಪೃಥ್ವಿ ಶಾ ತಮ್ಮ 25 ನೇ ಬರ್ತಡೇ ಸಂದರ್ಭದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಿಡಿಯೋ ಸಹ ಟ್ರೋಲ್ ಆಗಿತ್ತು. ಈ ಬಗ್ಗೆ ಸಹ ಪ್ರತಿಕ್ರಿಯೆ ನೀಡಿರುವ ಪೃಥ್ವಿ ಶಾ ನಾನು ವರ್ಷದಲ್ಲಿ ಒಂದು ದಿನ ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಭ್ರಮಾಚರಣೆ ಮಾಡುವುದು ಕೂಡ ತಪ್ಪಾ ಎಂಬ ಪ್ರಶ್ನೆ ನನ್ನಲ್ಲಿಯೇ ಕಾಡ ತೊಡಗಿದೆ. ಟ್ರೋಲ್ಗೆ ಒಳಗಾದವರೂ ಒಂದು ಕುಟುಂಬದ ಸದಸ್ಯ ಎಂಬುದನ್ನು ಮರೆತು ನಮ್ಮ ಜನರು ವರ್ತಿಸುತ್ತಿರುವುದು ಆಕ್ಷೇಪಾರ್ಹ ಹಾಗೂ ಅಪಾಯಕಾರಿ ನಡೆಯಾಗಿದೆ ಎಂದರು.
Prithvi Shaw making some sense, well said! pic.twitter.com/OnbOaQQX69
75 ಲಕ್ಷ ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿ ಶಾ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ್ದ ಪೃಥ್ವಿ ಶಾ ಹಲವು ಪಂದ್ಯಗಳಲ್ಲಿ ಶೂನ್ಯ ಸುತ್ತಿ ಕಳಪೆ ಪ್ರದರ್ಶನ ತೋರಿದ್ದರು. ಇದುವರೆಗೂ 79 ಐಪಿಎಲ್ ಪಂದ್ಯವನ್ನಾಡಿರುವ ಪೃಥ್ವಿ ಶಾ 1892 ರನ್ ಬಾರಿಸಿದ್ದಾರೆ.