ಕಲಬುರಗಿ : ರಾಜ್ಯದ ರೈತರು ಮತ್ತು ವಕ್ಫ್ ಕಮಿಟಿ ಜಟಾಪಟಿ ಸಂಬಂಧ ಕೇಂದ್ರದ ಜೆಪಿಸಿ ( ಜಂಟಿ ಸಂಸದೀಯ ಸಮಿತಿ) ಅಧ್ಯಕ್ಷ ಜಗದಾಂಬಿಕ ಪಾಲ್, ರಾಜ್ಯ ಪ್ರವಾಸಕ್ಕೆ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಕರ್ನಾಟಕಕ್ಕೆ ಜೆಪಿಸಿ ಅಧ್ಯಕ್ಷರು ಒಬ್ಬರೇ ಬಂದಿದ್ದಾರೆ, ಕಮಿಟಿಯ ಒಬ್ಬ ಸದಸ್ಯರಾದ್ರೂ ಬಂದಿದ್ದಾರಾ ಅಂತಾ ಪ್ರಶ್ನಿಸಿದ್ದಾರೆ.. ಚುನಾವಣೆ ಬಂದಾಗ ಮಾತ್ರ ಬಿಜೆಪಿಗೆ ರೈತರು ನೆನಪಾಗ್ತಾರೆ, ಜನರು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ..
ಖರ್ಗೆ ಕುಟುಂಬದಿಂದಲೇ ಆಸ್ತಿ ಕಬಳಿಕೆ ಅಂತಾ ಆರೋಪ ಮಾಡಿದ್ದಾರೆ.. ಬಿಜೆಪಿ ಸರ್ಕಾರ ಇದ್ದಾಗ ಕತ್ತೆ ಕಾಯ್ತಿದ್ರಾ ಅಂತಾ ವಾಗ್ದಾಳಿ ನಡೆಸಿದ್ದಾರೆ.. ನಿಮ್ಮದೇ ಸರ್ಕಾರ ಇದ್ದಾಗ ಏಕೆ ಕಣ್ಮುಚ್ಚಿ ಕುಳಿತಿದ್ರಿ ಅಂತಾ ಪ್ರಶ್ನೆ ಮಾಡಿದ್ದಾರೆ..